ಮಂಗಳೂರು, ಏ. 11: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ 14-03-2024 ರಿಂದ 14-04-2024ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಬುಧವಾರ ದೇವರಿಗೆ ಮಧ್ಯಾಹ್ನ ಮಹಾಪೂಜೆ, ಕಡೇ ಚೆಂಡು ಉತ್ಸವ ಹಾಗೂ ಆಳು ಪಲ್ಲಕ್ಕಿ ಉತ್ಸವ ನೇರವೇರಿತು.
‘ಚೆಂಡು ಆಟ’ ಕಾರ್ಯಕ್ರಮದಲ್ಲಿ ದೂರದ ಹಾಗೂ ಸಮೀಪದ ಪ್ರದೇಶಗಳ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಐದು ದಿನಗಳ ಆಚರಣೆಯುದ್ದಕ್ಕೂ ಕುಮಾರ ತೇರು, ಹೂ ತೇರು, ಸೂರ್ಯ ಮಂಡಲ, ಚಂದ್ರ ಮಂಡಲ, ಪಲ್ಲಕ್ಕಿ ಉತ್ಸವದಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ದೇವಳದ ತಂತ್ರಿಗಳಾದ ಸುಬ್ರಮಣ್ಯ ತಂತ್ರಿ, ಹಾಗೂ ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ ರಾಮ್ ಭಟ್, ಪರಮೇಶ್ವರ ಭಟ್, ಆಡಳಿತ ಮೊಕ್ತೇಸಾರ ಡಾ, ಮಂಜಯ್ಯ ಶೆಟ್ಟಿ ಅಮ್ಮಂಜೆಗುತ್ತು, ಮೊಕ್ತೇಸರರಾದ ತಾರಾನಾಥ ಅಳ್ವ, ಚೇರಾ ಸೂರ್ಯ ನಾರಾಯಣ ರಾವ್ , ಅಮ್ಮಂಜೆ ಗುತ್ತಿನವರು, ಉಳಿಪಾಡಿ ಗುತ್ತಿನವರು, ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಮಹೋತ್ಸವದಲ್ಲಿ ಪಾಲ್ಗೊಂಡಿದರು.