Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಆ.11ರಂದು ಮಂಗಳೂರು ತುಳುನಾಟಕ ಕಲಾವಿದರ ಒಕ್ಕೂಟದ ವಾರ್ಷಿಕ ಸಂಭ್ರಮ

    August 9, 2026

    ಆ.10 : ಮಂಗಳೂರಿನ ಉರ್ವಸ್ಟೋರ್ ಲ್ಲಿರುವ ಜಿಲ್ಲಾ ಅಂಬೇಡ್ಕರ್ ಭವನದಲ್ಲಿಎಂ. ದೇವದಾಸ್ ಅವರಿಗೆ ನುಡಿ ನಮನ ಕಾರ್ಯಕ್ರಮ

    August 8, 2026

    ಆ.9 : ಮಂಗಳೂರಿನಲ್ಲಿ ‘ಕುಂದಾಪ್ರ ಕನ್ನಡ ಹಬ್ಬ–2026’ ಹಾಗೂ ವಿಶ್ವ ಕುಂದಾಪ್ರ ದಿನಾಚರಣೆ ಆಚರಣೆ

    August 8, 2026

    Subscribe to Updates

    Get the latest creative news from FooBar about art, design and business.

    What's Hot

    ಆ.11ರಂದು ಮಂಗಳೂರು ತುಳುನಾಟಕ ಕಲಾವಿದರ ಒಕ್ಕೂಟದ ವಾರ್ಷಿಕ ಸಂಭ್ರಮ

    August 9, 2026

    ಆ.10 : ಮಂಗಳೂರಿನ ಉರ್ವಸ್ಟೋರ್ ಲ್ಲಿರುವ ಜಿಲ್ಲಾ ಅಂಬೇಡ್ಕರ್ ಭವನದಲ್ಲಿಎಂ. ದೇವದಾಸ್ ಅವರಿಗೆ ನುಡಿ ನಮನ ಕಾರ್ಯಕ್ರಮ

    August 8, 2026

    ಆ.9 : ಮಂಗಳೂರಿನಲ್ಲಿ ‘ಕುಂದಾಪ್ರ ಕನ್ನಡ ಹಬ್ಬ–2026’ ಹಾಗೂ ವಿಶ್ವ ಕುಂದಾಪ್ರ ದಿನಾಚರಣೆ ಆಚರಣೆ

    August 8, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಜ.17 : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಪ್ರಾದೇಶಿಕ ಕೇಂದ್ರ ಕಚೇರಿಗೆ ಶಿಲಾನ್ಯಾಸ
    Local News

    ಜ.17 : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಪ್ರಾದೇಶಿಕ ಕೇಂದ್ರ ಕಚೇರಿಗೆ ಶಿಲಾನ್ಯಾಸ

    adminBy adminJanuary 14, 2025
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು, ಜ.14: ರಾಜ್ಯ ಸರಕಾರದಿಂದ ಸ್ಥಾಪಿಸಲ್ಪಟ್ಟ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ(ಆರ್ ಜಿಯುಎಚ್ ಎಸ್)ದ ಮಂಗಳೂರು ಪ್ರಾದೇಶಿಕ ಕೇಂದ್ರ ಕಚೇರಿಗೆ ಜ.17ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಲೈಡ್ ಮತ್ತು ಆರೋಗ್ಯ ರಕ್ಷಣಾ ಮಂಡಳಿಯ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ತಿಳಿಸಿದರು.
    ,
    ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ.ಯು.ಟಿ.ಇಫಿಕಾರ್ ಅಲಿ ಅವರು, ಕರಾವಳಿಯಲ್ಲಿ ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆ ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ ನಗರದ ಮೇರಿಹಿಲ್ ನಲ್ಲಿ ಆರ್ ಜಿಯುಎಚ್ ಎಸ್ನ ಹೊಸ ಪ್ರಾದೇಶಿಕ ಕೇಂದ್ರ ಆರಂಭವಾಗಲಿದೆ. ಈ ಕೇಂದ್ರವು ಕರಾವಳಿ ಹಾಗೂ ಸುತ್ತಮುತ್ತಲಿನ ಅಂಗಸಂಸ್ಥೆಗಳನ್ನು ಹೆಚ್ಚು ಪರಿಣಾಮ ಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದರು.

    ಈ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಅಂದಾಜು 25 ಕೋಟಿ ರೂ. ವೆಚ್ಚದ ವಿನೂತನ ಸಿಮ್ಯುಲೇಶನ್ ಲ್ಯಾಬ್, ಕ್ರೀಡಾ ಸಂಕೀರ್ಣ, ಸುಧಾರಿತ ಫಿಟ್ಟೆಸ್ ಕೇಂದ್ರ, ಮನೋರಂಜನಾ ಸೌಲಭ್ಯ ಹವಾನಿಯಂತ್ರಿತ ಸಭಾಂಗಣ, ಸುಧಾರಿತ ಸಂಶೋಧನಾ ಕೇಂದ್ರಗಳು, ಸೆಮಿನಾರ್ ಹಾಲ್ ನೊಂದಿಗೆ ಅಂದಾಜು 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಮತ್ತು ಭಾರತದ ಪ್ರಥಮ ಕೇಂದ್ರವಾಗಿ ಮೂಡಿಬರಲಿದೆ ಎಂದು ಅವರು ವಿವರ ನೀಡಿದರು.
    ಜ.17ರಂದು ಮೇರಿ ಹಿಲ್ ನ ಅಬಕಾರಿ ಇಲಾಖೆ ಕಟ್ಟಡದ ಪಕ್ಕದಲ್ಲಿ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಆರ್ ಜಿಯುಎಚ್ ಎಸ್ ಸಹ ಕುಲಪತಿ ಡಾ.ಶರಣ್ ಪ್ರಕಾಶ್ ಪಾಟೀಲ್, ಸಂಸದ ಬ್ರಿಜೇಶ್ ಚೌಟ, ಶಾಸಕ ಡಾ.ಭರತ್ ಶೆಟ್ಟಿ, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ಸರಕಾರದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಪ್ಪಿನ್, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ.ತ್ರಿವೇಣಿ, ಆರ್ ಜಿಯುಎಚ್ ಎಸ್ ನ ಉಪ ಕುಲಪತಿ ಡಾ.ಎಂ.ಕೆ. ರಮೇಶ್ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆರ್ಜಿ ಯುಎಚ್ ಎಸ್ ಸೆನೆಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಆರ್ ಜಿಯುಎಚ್ ಎಸ್ ನ ಸೆನೆಟ್ ಸದಸ್ಯರಾದ ಪ್ರೊ.ವೈಶಾಲಿ ಶ್ರೀಜಿತ್, ಡಾ.ಸಲೀಮುಲ್ಲಾ, ಡಾ.ಚರಿಶ್ಯಾ ಡಿಸಿಲ್ವ ಡಾ.ಮುಹಮ್ಮದ್ ಸುಹೈಲ್ ಉಪಸ್ಥಿತರಿದ್ದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News August 8, 2026

    ಆ.10 : ಮಂಗಳೂರಿನ ಉರ್ವಸ್ಟೋರ್ ಲ್ಲಿರುವ ಜಿಲ್ಲಾ ಅಂಬೇಡ್ಕರ್ ಭವನದಲ್ಲಿಎಂ. ದೇವದಾಸ್ ಅವರಿಗೆ ನುಡಿ ನಮನ ಕಾರ್ಯಕ್ರಮ

    Local News August 8, 2026

    ಆ.9 : ಮಂಗಳೂರಿನಲ್ಲಿ ‘ಕುಂದಾಪ್ರ ಕನ್ನಡ ಹಬ್ಬ–2026’ ಹಾಗೂ ವಿಶ್ವ ಕುಂದಾಪ್ರ ದಿನಾಚರಣೆ ಆಚರಣೆ

    Local News August 8, 2026

    ಉಡುಪಿ : ಮುದರಂಗಡಿಯಲ್ಲಿ ಹಾಡುಹಗಲೇ ದುಷ್ಕರ್ಮಿಗಳಿಂದ ಉದ್ಯಮಿ ಡೇವಿಡ್ ಡಿಸೋಜಾರ ಗುಂಡಿಕ್ಕಿ ಹತ್ಯೆ

    Local News August 7, 2026

    ಆ 7- 9: ಮಂಗಳೂರಿನಲ್ಲಿ 37ನೇ ವಾರ್ಷಿಕ ‘SZUSICON 2026’ ಸಮ್ಮೇಳನ

    Local News August 4, 2026

    ಆ. 7 : ಗೋಲ್ಡನ್ ಮೂವೀಸ್ ಬ್ಯಾನರ್‌ನಲ್ಲಿ ತಯಾರಾದ ‘ಪಿಕ್ಚರ್’ ರಾಜ್ಯಾದ್ಯಂತ ಬಿಡುಗಡೆ

    Local News August 3, 2026

    ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಂದ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಬರೆದಿರುವ ‘ತ್ಯಾಗಮಯಿ ಮೊಳಹಳ್ಳಿ’ಕೃತಿ ಬಿಡುಗಡೆ

    Comments are closed.

    Demo
    Don't Miss
    Local News August 8, 2026

    ಆ.10 : ಮಂಗಳೂರಿನ ಉರ್ವಸ್ಟೋರ್ ಲ್ಲಿರುವ ಜಿಲ್ಲಾ ಅಂಬೇಡ್ಕರ್ ಭವನದಲ್ಲಿಎಂ. ದೇವದಾಸ್ ಅವರಿಗೆ ನುಡಿ ನಮನ ಕಾರ್ಯಕ್ರಮ

    ಮಂಗಳೂರು,ಆ. 08 : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಇದರ ರಾಜ್ಯ ಸಮಿತಿಯ ವತಿಯಿಂದ ಇತ್ತೀಚೆಗೆ ನಿಧನರಾದ…

    ಆ.9 : ಮಂಗಳೂರಿನಲ್ಲಿ ‘ಕುಂದಾಪ್ರ ಕನ್ನಡ ಹಬ್ಬ–2026’ ಹಾಗೂ ವಿಶ್ವ ಕುಂದಾಪ್ರ ದಿನಾಚರಣೆ ಆಚರಣೆ

    August 8, 2026

    ಉಡುಪಿ : ಮುದರಂಗಡಿಯಲ್ಲಿ ಹಾಡುಹಗಲೇ ದುಷ್ಕರ್ಮಿಗಳಿಂದ ಉದ್ಯಮಿ ಡೇವಿಡ್ ಡಿಸೋಜಾರ ಗುಂಡಿಕ್ಕಿ ಹತ್ಯೆ

    August 8, 2026

    ಆ 7- 9: ಮಂಗಳೂರಿನಲ್ಲಿ 37ನೇ ವಾರ್ಷಿಕ ‘SZUSICON 2026’ ಸಮ್ಮೇಳನ

    August 7, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.