ಬಂಟ್ವಾಳ, ಜ.16): ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ರೇಖಾ ಜೆ.ಶೆಟ್ಟಿ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ ಶೆಟ್ಟಿ ಅವರನ್ನು ಬಂಟ್ವಾಳ ಪುರಸಭೆಗೆ ವರ್ಗಾಯಿಸಿ, ಬಂಟ್ವಾಳ ಮುಖ್ಯಾಧಿಕಾರಿಯವರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿ ಅದೇಶ ಮಾಡಲಾಗಿದೆ..
ರೇಖಾ ಶೆಟ್ಟಿ ಇವರು ಮೂಲತಃ ಬಂಟ್ವಾಳ ತಾಲೂಕಿನವರಾಗಿದ್ದು, ಬಂಟ್ವಾಳ ಪುರಸಭೆಯ ವಿವಿಧ ಹುದ್ದೆಗಳನ್ನು ನಿರ್ವಹಿಸಿದವರು.