ಮಂಗಳೂರು ಏ.06 : ಜಪ್ಪು ಬಪ್ಪಾ ಲ್ ಶೀ ಜನಾರ್ದನ ಭಜನಾ ಮಂದಿರದ ಅಮೃತ ಮಹೋತ್ಸವದ ಕಾರ್ಯಕ್ರಮಗಳ ಅಂಗವಾಗಿ ಅಖಂಡ ಭಜನ ಸಪ್ತಾಹಕ್ಕೆ ಏ.05, ಶನಿವಾರ ಸೂರ್ಯೋದಯ ವೇಳೆ ನಂದಾದೀಪವನ್ನು ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಾಯಿತು.
ಶೀ ಜನಾರ್ದನ ಭಜನಾ ಮಂದಿರದ ಮಂದಿರದ ಅಧ್ಯಕ್ಷ ಜೆ. ನವೀನ್ ಶೆಟ್ಟಿ ಮತ್ತು ವಿನಯಾ ಎನ್. ಶೆಟ್ಟಿ ದಂಪತಿ ಜ್ಯೋತಿ ಬೆಳಗಿಸಿದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಜೆ. ರಘುವೀರ್, ಅಮೃತ ಮಹೋತ್ಸವದ ಸಮಿತಿ ಸಂಚಾಲಕ ಜೆ.ಪುಂಡಲೀಕ ಸುವರ್ಣ, ಉಪಾಧ್ಯಕ್ಷ ಸತೀಶ್ ಆಚಾರ್, ಲಕ್ಷ್ಮಣ್ ಆಚಾರ್, ರಘುವೀರ್ ಆಚಾರ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್,ಕೋಶಾಧಿಕಾರಿ ಉಮೇಶ್ ಕೆ., ವಸಂತ ಶೆಟ್ಟಿ, ಅಶ್ವತ್ ಶೆಟ್ಟಿ, ಜೆ. ನವೀನ್ ಕುಮಾರ್, ಪುಷ್ಪರಾಜ್ ಶೆಟ್ಟಿ, ವಿ.ಕೆ.ರಾಜನ್, ಕಿಶೋರ್ ಕೋಟ್ಯಾನ್, ಅರವಿಂದ ರಾವ್, ಜಯಶ್ರೀ ಸುನಿಲ್, ಸರಿತಾ, ಅರ್ಚಕ ಬಿ. ಬಾಲಕೃಷ್ಣ ಉಪಸ್ಥಿತರಿದ್ದರು.