ವಿಟ್ಲ, ಏ.07 : ಶಾರದಾ ಆರ್ಟ್ಸ್ ಮಂಜೇಶ್ವರ ಇದರ ಕಲಾವಿದ ಸುರೇಶ್ ವಿಟ್ಲ ಇಂದು ನಿಧನ ಹೊಂದಿದರು.
ಸುರೇಶ್ ವಿಟ್ಲ ಅವರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ತುಳು ನಾಟಕ ಕಲಾವಿದ ಸುರೇಶ್ ವಿಟ್ಲ ಅವರು ಖಳನಾಯಕ, ಸ್ತ್ರೀ ವೇಷ, ಹಾಸ್ಯ ನಾಟಕಗಳಲ್ಲಿ ವಿವಿಧ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.