ಮಂಗಳೂರು, ಡಿ.18 : ಅಡ್ಯಾರು ಗ್ರಾಮ ಪಂಚಾಯತ್ ,ಪ್ರಕೃತಿ ಸಂಜೀವಿನಿ ಒಕ್ಕೂಟ ಹಾಗೂ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಇದರ ಸಂಯುಕ್ತ ಆಶ್ರಯದಲ್ಲಿ ಡಿ 2೦ ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯ ತನಕ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಅಡ್ಯಾರು ಗ್ರಾಮೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಅಡ್ಯಾರು ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಅಂದುಪೂರ್ವಾಹ್ನ 9 ರಿಂದ ಮಕ್ಕಳ ಪಥ ಸಂಚನದ ಬಳಿಕ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ ಅವರು ನೆರವೇರಿಸಲಿದ್ದಾರೆ . ಅಧ್ಯಕ್ಷತೆಯನ್ನು ಅಡ್ಯಾರು ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಅಬ್ದುಲ್ ಜಲೀಲ್ ವಹಿಸಲಿರುವವರು . ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ , ಅಡ್ಯಾರು ಗ್ರಾಮ ಪಂಚಾಯತ್ ಇದರ ಉಪಾಧ್ಯಕ್ಷರಾದ ಝೋಹರಾ ಭಾಗವಹಿಸಲಿದ್ದಾರೆ . ಸಂಜೆ 4.3೦ ರಿಂದ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ನಡೆಯಲಿದೆ.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ದರ್ಶನ್ ಹೆಚ್. ವಿ., ದ. ಕ. ಜಿಲ್ಲೆಯ ಸಂಸದರಾದ ಕ್ಯಾ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ, ಎಸ್ ಎಲ್ ಭೋಜೇಗೌಡ ,ಪ್ರತಾಪ್ ಸಿಂಹ ನಾಯಕ್, ಧನಂಜಯ್ ಸರ್ಜಿ , ಕಿಶೋರ್ ಬಿ ಆರ್ ಸಹಿತ ಅನೇಕ ಮಂದಿ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಆಸಿಫ್ , ಅಬ್ದುಲ್ ರಜಾಕ್ ಮತ್ತು ಅಶ್ರಫ್ ಅಡ್ಯಾರ್ ಉಪಸ್ಥಿತರಿದ್ದರು.











