ಮಂಗಳೂರು, ಮೇ. 07 : ಸ್ನೇಹಕೃಪಾ ಲಾಂಛನದಲ್ಲಿ ಉಪ್ಪಳ ರಾಜಾರಾಮ ಶೆಟ್ಟಿ ಅರ್ಪಿಸುವ ಗಂಟ್ ಕಲ್ವೆರ್’ ತುಳು ಚಲನ ಚಿತ್ರ ಮೇ 23ರಂದು ರಾಜ್ಯಾದ್ಯಾಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಸುಧಾಕರ ಬನ್ನಂಜೆ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುನ್ನುಸುಧಾಕರ್ ಬನ್ನಂಜೆ ಅವರು ಬರೆದು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗಿರೀಶ್ ಪೂಜಾರಿ ಸಹಕಾರವಿದ್ದು, ಮಮತಾ ಎಸ್. ಬನ್ನಂಜೆ, ಕೃತಿ ಆರ್.ಶೆಟ್ಟಿ, ಪ್ರಾರ್ಥನ್ ಬನ್ನಂಜೆ, ಪ್ರೇರಣ್ ಬನ್ನಂಜೆ ಸಹ ನಿರ್ಮಾಪಕರಾಗಿದ್ದಾರೆ. ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಸಂಗೀತ ನೀಡಿದ್ದಾರೆ. ಕಲಾನಿರ್ದೇಶನ ತಮ್ಮ ಲಕ್ಷ್ಮಣ, ಸಂಕಲನ ಕೆ.ಗಿರೀಶ್ ಕುಮಾರ್, ಪ್ರಚಾರ ಬಾಳ ಜಗನ್ನಾಥ ಶೆಟ್ಟಿ,ಛಾಯಾ ಗ್ರಹಣ ಶಂಕರ್ ರವಿಕಿಶೋರ್, ಸಹ ನಿರ್ದೇಶಕರಾಗಿ ಪ್ರಶಾಂತ್ ಎಳ್ಳಂಪಳ್ಳಿ ಮತ್ತು ರಾಮದಾಸ್ ಸಸಿಹಿತ್ತು ದುಡಿದಿದ್ದಾರೆ ಎಂದರು.
ನಾಯಕ ನಟನಾಗಿ ಆರ್ಯನ್ ಶೆಟ್ಟಿ, ನಾಯಕ ನಟಿಯಾಗಿ ಸ್ಮಿತಾ ಸುವರ್ಣ, ತಾರಾಗಣದಲ್ಲಿ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರು, ಸುಧೀರ್ ಕೊಠಾರಿ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸುಂದರ ರೈ ಮಂದಾರ, ಗಿರೀಶ್ ಶೆಟ್ಟಿ ಕಟೀಲು, ನಾಗೇಶ್ ಡಿ.ಶೆಟ್ಟಿ, ಕ್ಲಾಡಿ ಡಿಲೀಮಾ, ಸಂಪತ್, ವಸಂತ ಮುನಿಯಾಲ್, ರವಿ ಸುರತ್ಕಲ್, ಯಾದವ ಮಣ್ಣಗುಡ್ಡೆ, ಪ್ರದೀಪ್ ಆಳ್ವ ಅಭಿನಯಿಸಿದ್ದಾರೆ. ಪ್ರತಿಭಾವಂತ ನಾಯಕ ನಟರಾದ ಅಥರ್ವ ಪ್ರಕಾಶ್, ಶ್ರೀಕಾಂತ ರೈ, ಪ್ರಣವ್ ಹೆಗ್ಡೆ, ಶೈಲೇಶ್ ಕೋಟ್ಯಾನ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಧಾಕರ ಕುದ್ರೋಳಿ, ನಟ ಉಮೇಶ್ ಮಿಜಾರ್, ರಾಕೇಶ್ ಆಚಾರ್ಯ, ಆರ್ಯನ್ ಶೆಟ್ಟಿ,ಪ್ರಶಾಂತ್ ಆಚಾರ್ಯ, ನಾಗೇಶ್ ಡಿ. ಶೆಟ್ಟಿಉಪಸ್ಥಿತರಿದ್ದರು.