ಮಂಗಳೂರು, ಮೇ.08: ಶ್ರೀ ಗುರು ಸೌಹಾರ್ದ ಸಹಕಾರಿ ಸಂಘ ನಿ. ಇದರ ಆಡಳಿತ ಕಚೇರಿ ಹಾಗೂ ಸ್ಥಳಾಂತರ ಗೊಂಡ ಉರ್ವ ಶಾಖೆಯ ಕಚೇರಿ ಬಿಜೈ ಕಾಪಿಕಾಡ್ ರಸ್ತೆಯಲ್ಲಿರುವ ಗಿರಿ ಅಪಾರ್ಟ್ ಮೆಂಟ್ನ ಪಿಂಟೋ ಚೇಂಬರ್ಸ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಬುಧವಾರ ಉದ್ಘಾಟನೆಗೊಂಡಿತು.
ಕುದ್ರೋಳಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ದೀಪ ಬೆಳಗಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು ಅವರು ಸ್ವಾವಲಂಬಿಗಳಾಗಿ ಜೀವನದಲ್ಲಿ ಸಾಧಿಸಬೇಕು ಎಂಬ ಉದ್ದೇಶದಿಂದ ಶ್ರೀ ಗುರು ಹಾರ್ದ ಸಹಕಾರಿ ಸಂಘ ಆರಂಭವಾಗಿದೆ ಎಂದರು.
ಸಂಘದ ಅಧ್ಯಕ್ಷೆ ಸುಮಲತಾ ನವೀನ್‌ಚಂದ್ರ ಸುವರ್ಣ ಮಾತನಾಡಿ, ಆರ್ಥಿಕವಾಗಿ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡಲು ಶ್ರೀ ಗುರು ಸೌಹಾರ್ದ ಸಹಕಾರಿ ಸಂಘದ ಉದ್ದೇಶವಾಗಿದೆ. 17 ವರ್ಷಗಳಿಂದ ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿ ಸಂಘ ಬೆಳೆಯುತ್ತಿದೆ. ಬಜಪೆ, ತೊಕ್ಕೊಟ್ಟು ಉರ್ವ, ಕೈಕಂಬ, ಬಿ.ಸಿ.ರೋಡು,ಕಿನ್ನಿಗೋಳಿಯಲ್ಲಿ ಶಾಖೆ ಯನ್ನು ಹೊಂದಿದೆ ಎಂದರು.
ಶಾಖೆಯನ್ನುಉದ್ಘಾಟಿಸಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಲ್ಯಾನ್ಸ್‌ಲೋಟ್ ಪಿಂಟೋ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ, ಸುಧೀರ್ ಕುಮಾರ್ ಅವರು ಠೇವಣಿದಾರರಿಗೆ ಪ್ರಮಾಣಪತ್ರ ವಿತರಿಸಿದರು. ಮುಖ್ಯ ಅತಿಥಿ ಮೆ| ಎಡಿಫೀಸ್ ಇಂಜಿನಿಯರ್ಸ್ ನ ಪ್ರತೀಶ್ ಅಂಚನ್ ಲಾಕರ್ ಸೌಲಭ್ಯ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸುಖಲಾಕ್ಷಿ ವೈ. ಸುವರ್ಣ, ನಿರ್ದೇಶಕರಾದ ದಯಾಮಣಿ ವಿ. ಕೋಟ್ಯಾನ್, ಶುಭಾ ಜಯಚಂದ್ರ, ಅಮೃತ ಡಿ. ಕೂಳೂರು, ಗೀತಾ ದಿವಾಕರ್, ಮೋಹಿನಿ ರಾಮಚಂದ್ರ, ರೇವತಿ ಅಶೋಕ್, ಭಾರತಿ ದೇವದಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಪುಷ್ಪಾನಂದ ಕುಮಾ ಪ್ರಮುಖರಾದ ಕೆ.ಎ, ರೋಹಿಣಿ, ನಂದನ್ ಉಪಸ್ಥಿತರಿದ್ದರು.ನಿರ್ದೇಶಕಿ ಶಕೀಲಾರಾಜ್ ನಿರೂಪಿಸಿದರು.
ಶ್ರೀ ಗುರು ಸೌಹಾರ್ದ ಸಹಕಾರಿ ಸಂಘದಲ್ಲಿ ಚಿನ್ನದ ಈಡಿನ ಮೇಲಿನ ಸಾಲ ಗ್ರಾಂ.ಗೆ 6500 ರೂ., ವರ್ಷಕ್ಕೆ ಶೇ.12 ಬಡ್ಡಿದರದಲ್ಲಿ 6 ತಿಂಗಳ ಅವಧಿಗೆ ಗ್ರಾಂ. ಗೆ 7500 ರೂ., ತಿಂಗಳಿಗೆ 100 ರೂ.ಗೆ 1.09 ಪೈಸೆಯಂತೆ ಬಡ್ಡಿದರದಲ್ಲಿ ಸಾಲ ದೊರೆಯಲಿದೆ. ವಾಹನ ಖರೀದಿ ಸಾಲ, ಗೃಹ ನಿರ್ಮಾಣ ಸಾಲ, ಜಾಮೀನು ಸಾಲ, ಮೂಲ ದಸ್ತಾವೇಜು ಆಧಾರದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ.