ಬೆಂಗಳೂರು, ಮೇ. 19 : ನಗರದಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಯಿಂದ ಗೋಡೆ ಕುಸಿದು 35 ವರ್ಷದ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ.
ಘಟನೆಯು ನಗರದ ವೈಟ್ ಫೀಲ್ಡ್ ನ ಚನ್ನಸಂದ್ರದಲ್ಲಿ ದುರಂತ ಸಂಭವಿಸಿದೆ. ಮೃತ ಮಹಿಳೆ ಯನ್ನು ಖಾಸಗಿ ಕಂಪನಿಯ ಉದ್ಯೋಗಿ ಶಶಿಕಲಾ(35) ಎಂದು ಗುರುತಿಸಲಾಗಿದೆ. ವೈಟ್ ಫೀಲ್ಡ್ ಇಂಡರ್ಷಿಯಲ್ ಏರಿಯಾದ ಇಸ್ಮೋ ಮೈಕ್ರೋ ಸಿಸ್ಟ್ ಕಂಪನಿಯಲ್ಲಿ ಮೃತ ಶಶಿಕಲಾ ಫಸ್ಟ್ ಶಿಫ್ಟ್ ಕೆಲಸಕ್ಕೆ ಹಾಜರಾಗಿ ಕೆಲವೇ ಹೊತ್ತಿನಲ್ಲೆ ಗೋಡೆ ಕುಸಿದು ದುರಂತ ಸಂಭವಿಸಿದೆ.
ಶಶಿಕಲಾ ಕೆಲಸ ಮಾಡಿಕೊಂಡಿದ್ದ ಕಂಪನಿಯಿಂದಲೇ ಪರಿಹಾರಕ್ಕೆ ಬಿಬಿಎಂಪಿ ಪಾಲಿಕೆ ಮುಖ್ಯ ಆಯುಕ್ತರಿಂದ ಸೂಚನೆ ಹಿನ್ನೆಲೆ ಮೃತ ಮಹಿಳೆಯ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರ ಧನ ಘೋಷಿಸಲಾಗಿದೆ ಎಂದು ವರದಿಯಾಗಿದೆ.