ಬೆಂಗಳೂರು , ಜುಲೈ, 26 :: ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಸದ್ಗುರು ಶ್ರೀ ಮಧುಸೂಧನ್ ಸಾಯಿ ರವರ ಒನ್ ವರ್ಡ್ ಒನ್ ಫ್ಯಾಮಿಲಿ ವಿಷನ್ ಮೂಲಕ ಸಾಯಿ ಸಿಂಪನಿ ಆರ್ಕೆಸ್ಟ್ರಾ ತಂಡದಿಂದ ಯುವ ಪ್ರತಿಭೆಗಳ ಸಂಗೀತ ಮ್ಯೂಸಿಕಲ್ ಕಾನ್ಸರ್ಟ್ ಕಾರ್ಯಕ್ರಮ ಬೃಹತ್ ಸಭಾಂಗಣದಲ್ಲಿ ಸುಂದರ ಪರಿಸರದ ನಡುವೆ ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ವ್ಯವಸ್ಥಾಪಕ, ಸಾಯಿ ಗ್ಲೋಬಲ್ ರುವಾರಿ ಒನ್ ವರ್ಡ್ ಒನ್ ಫ್ಯಾಮಿಲಿ ವಿಷನ್ ಮುಖ್ಯಸ್ಥ ಸದ್ಗುರು ಶ್ರೀ ಮಧುಸೂಧನ್ ಸಾಯಿ ಅವರು ಮಾತನಾಡುತ್ತಾ ,ಈ ಸಂಗೀತ ಪ್ರತಿಭೆಗಳ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಬಂದಿದ್ದು ಬಹಳ ಸಂತೋಷದ ವಿಚಾರ. ನಾನು ಅವರನ್ನ ಜೂಮ್ ಆಪ್ ಗೆ ಬನ್ನಿ ವಿದ್ಯಾರ್ಥಿಗಳ ಜೊತೆ ಮಾತನಾಡಿ ಎಂದಿದ್ದೆ , ಆದಕ್ಕೆ ಅವರು ಯುವ ಪ್ರತಿಭೆಗಳನ್ನ ಪ್ರೋತ್ಸಾಹಿಸಲು ನಾನು ನೇರವಾಗಿ ಬರುತ್ತೇನೆ ಎಂದು ಹೇಳಿದ್ದರು. ಅವರು ಈ ಒಂದು ಕಾರ್ಯಕ್ರಮಕ್ಕೆ ಬಂದಿರುವುದು ಅವರಿಗೆ ಸಂಗೀತ ಮೇಲೆ ಪ್ರೀತಿ ಎಷ್ಟಿದೆ ಎಂದು ತಿಳಿಯುತ್ತೆ . ಇದು ನಮ್ಮ ಸಂಸ್ಥೆಗೂ ಹೆಮ್ಮೆಯ ತರುವ ವಿಚಾರವಾಗಿದೆ ಎಂದರು.
ನಂತರ ಮುಖ್ಯ ಅತಿಥಿ ಪದ್ಮಭೂಷಣ ಗ್ರ್ಯಾಮಿ ಅವಾರ್ಡ್ ವಿನ್ನರ್ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಮಾತನಾಡುತ್ತಾ, ನಾನು ಕೂಡ 15 ವರ್ಷ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿ ಚೆನ್ನೈನಲ್ಲಿ ಕ್ಲಾಸಿಕಲ್ , ಕವಾಲಿ , ಹಿಂದುಸ್ತಾನಿ , ಸಂಗೀತ ತರಬೇತಿ ನಡೆಸುತ್ತಿದೆ. ನನಗೆ ಗುರುಗಳು ಆರ್ಕೆಸ್ಟ್ರಾ ನಡೆಸುತ್ತಿದ್ದಾರೆ ಎಂದು ತಿಳಿದು ತಕ್ಷಣ ಆಶ್ರವಾಯಿತು , ಎಲ್ಲಿ ಎಂದು ಕೇಳಿ ವಿಚಾರ ತಿಳಿದುಕೊಂಡು ಬಂದೆ. ಇತ್ತೀಚಿಗೆ ಪೂರ್ವದಲ್ಲಿ ಆರ್ಕೆಸ್ಟ್ರಾ ಮುಚ್ಚುತ್ತಿದ್ದರೆ , ಪಶ್ಚಿಮದಲ್ಲಿ ಆರ್ಕೆಸ್ಟ್ರಾ ಸದ್ದು ಮಾಡಿ ಬೆಳೆಯುತ್ತಿದೆ. ಇದೊಂದು ಒಳ್ಳೆ ಬೆಳವಣಿಗೆ, ಭಾರತದಲ್ಲಿ ಒಂದು ಉತ್ತಮ ಆರ್ಕೆಸ್ಟ್ರಾ ತಂಡವಾಗಿ ಹೊರಬರುವ ಎಲ್ಲಾ ಲಕ್ಷಣಗಳು ಈ ತಂಡಕ್ಕೆ ಇದೆ. ಈ ಸಂಸ್ಥೆಗೆ ಶುಭವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಪದ್ಮಭೂಷಣ ಗ್ರ್ಯಾಮಿ ಅವಾರ್ಡ್ ವಿನ್ನರ್ ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ , ಕ್ಲಾಸಿಕಲ್ ಹಾಗೂ ಭಕ್ತಿ ಪ್ರಧಾನ ಸಂಗೀತ ನಿರ್ದೇಶಕ ಪಂಡಿತ್ ಬಾಗ್ದೀಪ್ , ಪ್ರಪಂಚದಾದ್ಯಂತ ಭಕ್ತಿ ಸುಧೆಯ ಸುಮಿತ್ ಟಾಕೂ , ಎ.ಆರ್. ರೆಹಮಾನ್ ಟೀಮ್ನಲ್ಲಿರುವ ಶುಭಂ ಭಟ್, ಅಬ್ದುಲ್, ಸತ್ಯಸಾಯಿ ಲೋಕಸೇವಾ ಗ್ರೂಪ್ ಆಫ್ ಗುರುಕುಲಂ ಚೀಫ್ ಮೆಂಟರ್ ಬಿ.ಎನ್. ನರಸಿಂಹಮೂರ್ತಿ ಸೇರಿದಂತೆ ದೇಶ , ವಿದೇಶಗಳ ಪ್ರಖ್ಯಾತ ಸಂಗೀತ ನಿರ್ದೇಶಕರು, ಗಣ್ಯರು , ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದಿದ್ದರು.