Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಬಂಟರ ಯಾನೆ ನಾಡವರ ಮಾತೃ ಸಂಘದಅಧ್ಯಕ್ಷರಾಗಿ ಕೆ ಅಜಿತ್ ಕುಮಾರ್ ರೈ ಮಾಲಾಡಿ ಪುನರಾಯ್ಕೆ

    April 30, 2026

    ಚಿತ್ರೀಕರಣ ಪೂರ್ಣಗೊಳಿಸಿದ “ವಾದಿರಾಜ ವಾಲಗ ಮಂಡಳಿ” ಚಿತ್ರ ತಂಡ – ಡಾ. ಎಂ.ಎನ್ ರಾಜೇಂದ್ರ ಕುಮಾರ್

    April 29, 2026

    ಎಂಸಿಸಿ ಬ್ಯಾಂಕ್ ವತಿಯಿಂದ ಅಂತರರಾಜ್ಯ ಬ್ಯಾಂಕಿಂಗ್ ಸಂವಾದ

    April 29, 2026

    Subscribe to Updates

    Get the latest creative news from FooBar about art, design and business.

    What's Hot

    ಬಂಟರ ಯಾನೆ ನಾಡವರ ಮಾತೃ ಸಂಘದಅಧ್ಯಕ್ಷರಾಗಿ ಕೆ ಅಜಿತ್ ಕುಮಾರ್ ರೈ ಮಾಲಾಡಿ ಪುನರಾಯ್ಕೆ

    April 30, 2026

    ಚಿತ್ರೀಕರಣ ಪೂರ್ಣಗೊಳಿಸಿದ “ವಾದಿರಾಜ ವಾಲಗ ಮಂಡಳಿ” ಚಿತ್ರ ತಂಡ – ಡಾ. ಎಂ.ಎನ್ ರಾಜೇಂದ್ರ ಕುಮಾರ್

    April 29, 2026

    ಎಂಸಿಸಿ ಬ್ಯಾಂಕ್ ವತಿಯಿಂದ ಅಂತರರಾಜ್ಯ ಬ್ಯಾಂಕಿಂಗ್ ಸಂವಾದ

    April 29, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 72 ನೇ ಅವತರಣೋತ್ಸವ ಅಮೃತೋತ್ಸವ 2025
    Local News

    ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 72 ನೇ ಅವತರಣೋತ್ಸವ ಅಮೃತೋತ್ಸವ 2025

    adminBy adminOctober 13, 2025
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು, ಅ. 13 : ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 72 ನೇ ಅವತರಣೋತ್ಸವ ಅಮೃತೋತ್ಸವ 2025 ಕಾರ್ಯಕ್ರಮ ಅ. 11, ಶನಿವಾರ ನಡೆಯಿತು.

    ಅಂದು ಬೆಳಗ್ಗೆ 8.45ಕ್ಕೆ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಅಮೃತ ಜ್ಯೋತಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಿದರು. ಗಂಟೆ 9ರಿಂದ ಶ್ರೀ ಗುರು ಪಾದುಕಾ ಪೂಜೆ, ಸತ್ಸಂಗ, ಭಜನೆ, ಧ್ಯಾನ, ನಂತರ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಆರ್ಶಿವಾಚನದಲ್ಲಿ ಕಳೆದ 25 ವರ್ಷಗಳಿಂದ ಮಠವು ಧಾರ್ಮಿಕ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಪ್ರಗತಿಯ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಾತಾಡಿ,, ಮಂಗಳೂರಿನ ಮಾತಾ ಅಮೃತಾನಂದಮಯಿ ಮಠವು ಬಡವರಿಗೆ ಉಚಿತ ಆರೋಗ್ಯತಪಾಸಣಾ ಹಾಗೂ ಚಿಕಿತ್ಸಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಕ್ಷೇತ್ರಕ್ಕೆ ಮಾತಾ ಅಮೃತಾನಂದಮಯಿ ದೇವಿ ಯವರ ಕೊಡುಗೆ ಅಪಾರವಾದುದು ಎಂದು ಹೇಳಿದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಮೃತ ಯೂನಿವರ್ಸಿಟಿ ಕೊಚ್ಚಿಯ ಡೀನ್ ಹಾಗೂ ಡೈರೆಕ್ಟರ್ ಡಾ.ಯು.ಕೃಷ್ಣ ಕುಮಾರ್ ಅವರು ಮಾತಾಡಿ,, ಮಾತಾ ಅಮೃತಾನಂದಮಯಿ ಮಠವು ದೇಶದಲ್ಲೇ ಒಂದು ಮಾದರಿ ಸಂಸ್ಥೆಯಾಗಿದ್ದು ಅಮ್ಮನವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ನಡೆಯುವ ಸಮಾಜಮುಖಿ ಕಾರ್ಯಗಳ ಮೂಲಕ ಇದನ್ನು ಕಾಣಬಹುದಾಗಿದೆ ಎಂದರು.

    ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ, ವೇದವ್ಯಾಸ ಕಾಮತ್ ಅವರು ಮಾತಾಡಿ,ಮಂಗಳೂರಿನ ಮಾತಾ ಅಮೃತಾನಂದಮಯಿ ಮಠವು ತನ್ನ ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು  ಅಗತ್ಯವುಳ್ಳ ಮಕ್ಕಳ ಹೃದಯ ತಪಾಸಣೆ ಮಾಡಿ ಶಸ್ತ್ರ ಚಿಕಿತ್ಸೆ ಅಗತ್ಯವುಳ್ಳವರಿಗೆ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡುತ್ತಿರುವುದು ಹಾಗೂ ಇಲ್ಲಿ ವಿತರಣೆ ಮಾಡುತ್ತಿರುವ ವಸ್ತ್ರದಾನ ಮುಂತಾದವುಗಳು ಒಂದು ಮಾದರಿ ಉಪಕ್ರಮವಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ, ಅಮೃತ ವಿಶ್ವವಿದ್ಯಾ ಪೀಠಂ ಕೊಚ್ಚಿ ಕ್ಯಾಂಪಸ್ ನ ಡೀನ್, ನಿರ್ದೇಶಕ ಡಾ| ಯು. ಕೃಷ್ಣ ಕುಮಾರ್, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಡಾ| ವಸಂತಕುಮಾರ್ ಪೆರ್ಲ, ಖಜಾಂಚಿ ಯು. ರಾಮನಾಥ್ ನಾಯಕ, ಸದಸ್ಯರಾದ ಡಾ|ದೇವದಾಸಪುತ್ರನ್ ಮತ್ತಿತ್ತರರು ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಅರ್ಹಫಲಾನುಭವಿ ಮಹಿಳೆಯರಿಗೆ ಸೀರೆಯನ್ನು ವಿತರಿಸಲಾಯಿತು ರವಿ ಅಲೆವೂರಾಯ ಮತ್ತು ತಂಡದವರಿಂದ ಅಮೃತಮಯಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಬಳಿಕ ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ, ಸಂಜೆ ಬಾಲಕೃಷ್ಣ ಭಟ್ ಮತ್ತು ಅವರ ತಂಡದಿಂದ ಶ್ರೀ ಚಕ್ರಪೂಜೆ ತಂತ್ರ ರತ್ನ ಬ್ರಹ್ಮಶ್ರೀ ಕಾರ್ಯಕ್ರಮ ನೆರವೇರಿತು.

    ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಸ್ವಾಗತಿಸಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲವಂದಿಸಿದರು.ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಡಾ.ದೇವದಾಸ್ ಪುತ್ರನ್ ನಿರೂಪಣೆ ಮಾಡಿದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News April 29, 2026

    ಚಿತ್ರೀಕರಣ ಪೂರ್ಣಗೊಳಿಸಿದ “ವಾದಿರಾಜ ವಾಲಗ ಮಂಡಳಿ” ಚಿತ್ರ ತಂಡ – ಡಾ. ಎಂ.ಎನ್ ರಾಜೇಂದ್ರ ಕುಮಾರ್

    Local News April 26, 2026

    ಫಳ್ನೀರ್ ವಾರ್ಡಿನ ಗೋರಿಗುಡ್ಡ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    Local News April 25, 2026

    ಜೆಪ್ಪು ವಾರ್ಡಿನ ಮಜಿಲ ನಾಗಬನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    Local News April 24, 2026

    ಮೇ 30 : ಅಡ್ಯಾರ್ ಗಾರ್ಡನ್ ನಲ್ಲಿ 11 ನೇ ವರ್ಷದ ಪಟ್ಲ ಸಂಭ್ರಮ 2026

    Local News April 24, 2026

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ ಕೊರಗ್ಲಾ ತನಿಯಾ’ ಮತ್ತು ‘ಕನ’ ತುಳು ಚಿತ್ರಗಳ ಮುಹೂರ್ತ ಕಾರ್ಯಕ್ರಮ

    Local News April 23, 2026

    ಏ. 24 : “ದೇವ್ ದಾಸ್ ನ ಲೀಲಾ ” ತುಳು ಚಿತ್ರ ತೆರೆಗೆ

    Comments are closed.

    Demo
    Don't Miss
    Local News April 29, 2026

    ಚಿತ್ರೀಕರಣ ಪೂರ್ಣಗೊಳಿಸಿದ “ವಾದಿರಾಜ ವಾಲಗ ಮಂಡಳಿ” ಚಿತ್ರ ತಂಡ – ಡಾ. ಎಂ.ಎನ್ ರಾಜೇಂದ್ರ ಕುಮಾರ್

    ಮಂಗಳೂರು, ಏ. 29  : “ವಾದಿರಾಜ ವಾಲಗ ಮಂಡಳಿ” ಕನ್ನಡ ಸಿನೆಮಾ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರಸ್ತುತ ಚಿತ್ರವು ಪೋಸ್ಟ್…

    ಎಂಸಿಸಿ ಬ್ಯಾಂಕ್ ವತಿಯಿಂದ ಅಂತರರಾಜ್ಯ ಬ್ಯಾಂಕಿಂಗ್ ಸಂವಾದ

    April 29, 2026

    ಬೆಂಗಳೂರು ರಾಜಕುಮಾರ್ ಸ್ಮಾರಕದ ಸಮೀಪದಲ್ಲಿರುವ ಬ್ಲೂ ಲೀಫ್ ಎಲ್‌ಇಡಿ ಗೋಡೌನ್‌ನಲ್ಲಿ ಅಗ್ನಿ ಅವಘಡ

    April 28, 2026

    ಫಳ್ನೀರ್ ವಾರ್ಡಿನ ಗೋರಿಗುಡ್ಡ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    April 26, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.