ಮಂಗಳೂರು, ಜೂ.26 : ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಅವರು ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಅವರು ವಿಶೇಷ ಅತಿಥಿಯಾಗಿ ಭಾಗವಹಿವಹಿಸಿದರು.
ಗಣ್ಯರು, ಉದ್ಯಮಿಗಳು, ವಿಐಪಿಗಳು ಹಾಗೂ ವಿಶೇಷ ಪಾಸ್ಗಳ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಆರಂಭದಲ್ಲಿ ಕರಾವಳಿಯ ಪ್ರಸಿದ್ಧ ಕಲಾ ತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು. ನಂತರ ಗಾಯಕ ಸಲ್ಮಾನ್ ಅಲಿ ಅವರ ಸಂಗೀತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ರೋಹನ್ ಕಾರ್ಪೊರೇಷನ್ನ ಐಷಾರಾಮಿ ವಾಟರ್‌ಫ್ರೆಂಟ್ ವಸತಿ ಯೋಜನೆಯಾದ ‘ರೋಹನ್ ಮರೀನಾ ಒನ್’ ಯೋಜನೆಗೆ ಶಾರುಖ್ ಖಾನ್ ಸಮ್ಮುಖದಲ್ಲಿ ಅದ್ಧೂರಿ ಮರುಚಾಲನೆ ನೀಡಲಾಯಿತು.
ಕಾರ್ಯಕ್ರಮದದಲ್ಲಿ ಶಾರುಖ್ ಖಾನ್ ಅವರು ಡಾ. ರೋಹನ್ ಮೊಂತೇರೊ ಮತ್ತು ಡಿಯೋನ್ ಮೊಂತೇರೊ ಅವರೊಂದಿಗೆ ಸಂವಾದ ನಡೆಸಿದರು.
ಸಾಹಿಲ್ ಝಹೀರ್ ಮತ್ತು ಆರ್.ಜೆ ಡೋನಾ ಕಾರ್ಯಕ್ರಮ ವನ್ನು ನಿರೂಪಿಸಿದರು.











