ಮಂಗಳೂರು, ಮೇ 16: ರಾಘವೇಂದ್ರ ಸ್ಟುಡಿಯೋ ಪ್ರೆಸೆಂಟ್ಸ್ ಹಾಗೂ ಕೋಸ್ಟಲ್ ಫಿಲಂಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಕನ್ನಡ ಟೆಲಿಚಿತ್ರ ‘ಮೊನಾಲಿಸಾ- ಇಸ್ ಇನ್ ಟ್ರಬಲ್ ಪ್ರೀಮಿಯರ್ ಶೋ ಮೇ 15, ಶುಕ್ರವಾರ ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ನಡೆಯಿತು.
ಮಾಜಿ ಸಚಿವರಾದ ರಮಾನಾಥ ರೈ ಅವರು ದೀಪ ಬೆಳಗಿಸುವ ಮೂಲಕ ಪ್ರೀಮಿಯರ್ ಶೋ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಕಾರ್ಯಕ್ರಮಕ್ಕೆ ಶುಭಕೋರಿದರು.ಕಾರ್ಯಕ್ರಮದಲ್ಲಿ ನ್ಯಾಯವಾದಿ ನವೀನ್ ಕುಮಾರ್ ಶೆಟ್ಟಿ ಅವರು ಮಾತಾಡಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಕೆ. ಹರೀಶ್ ಕುಮಾರ್,ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾ. ದೇವದಾಸ್ ರೈ,ನಿರ್ದೇಶಕ ಬೃಂದಾವನ್ ಎನ್. ಶೆಟ್ಟಿ , ಶ್ರೇಯಸ್ ಕುಮಾರ್ ಫರಂಗಿಪೇಟೆ, ನಟಿ ವಿನುತಾ ಸಿ. ನಾಯಕ್, ನ್ಯಾಯವಾದಿ ಪ್ರಸಾದ್ ಪಾಲನ್, ದೇವಿ ಪ್ರಸಾದ್ ಕೊಂಚಾಡಿ, ದಿನೇಶ್ ಕೋಟ್ಯಾನ್, ಅಭಿನವ್ ಉಪಸ್ಥಿತರಿದ್ದರು.











