ಮಂಗಳೂರು, ಅ.17: ಕೇರಳ ಮತ್ತು ಕರ್ನಾಟದಲ್ಲಿ ಕಾರ್ಯಾಚರಿಸುತ್ತಿರುವ ಬಿಂದು ಜುವೆಲ್ಲರಿಯ ಮಂಗಳೂರು ಶಾಖೆ ಅ.19ರಂದು ಎಸ್ ಸಿಎಸ್ ಆಸ್ಪತ್ರೆ ಬಳಿ ಶುಭಾರಂಭಗೊಳ್ಳಲಿದೆ ಎಂದು ಬಿಂದು ಜುವೆಲ್ಲರಿಯ ಮಾಲಕ ಅಭಿಲಾಷ್ ಕೆ.ವಿ., ಅವರು ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಂದು ಜುವೆಲ್ಲರಿಯ ಕರ್ನಾಟಕದ 2ನೇ ಶಾಖೆ ಬೆಳಗ್ಗೆ 10:30ಕ್ಕೆ ಉದ್ಘಾಟನೆಯಾಗಲಿದೆ. ಬಿಂದು ಜುವೆಲ್ಲರಿ ಕ್ಷೇತ್ರದಲ್ಲಿ ಕಳೆದ 40 ವರ್ಷಗಳ ಅನುಭವ ಹೊಂದಿರುವ ಸಂಸ್ಥೆಯು ಗ್ರಾಹಕರ ಜೊತೆ ದೀರ್ಘಾವಧಿಯ ಸಂಪರ್ಕವನ್ನು ಹೊಂದಿದೆ. 1982ರಲ್ಲಿ ಸಂಸ್ಥಾಪಕ ಕೆ.ವಿ.ಕುಂಞಕಣ್ಣನ್ ಅವರಿಂದ ಬಿಂದು ಚಿನ್ನಾಭರಣಗಳ ಈ ಪಯಣ ಆರಂಭಗೊಂಡಿತ್ತು. ಇದೀಗ ಕರ್ನಾಟಕ ಮತ್ತು ಕೇರಳದ ಗ್ರಾಹಕರಿಗೆ ಚಿನ್ನದ ಪರಿಶುದ್ಧತೆಯ ಬದ್ಧತೆಯೊಂದಿಗೆ ನವನವೀನ ವಿನ್ಯಾಸವನ್ನು ಒದಗಿಸುವ ಮೂಲಕ ಅವರ ವಿಶ್ವಾಸವನ್ನು ಗಳಿಸಿಕೊಂಡಿದೆ.ಬಿಂದು ಜುವೆಲ್ಲರಿಯ ನೂತನ ಶಾಖೆಯಲ್ಲಿ ವಜ್ರ ಹಾಗೂ ಕಡಿಮೆ ತೂಕದ ಚಿನ್ನಾಭರಣಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
ಬಿಂದು ಜುವೆಲ್ಲರಿ ತನ್ನ ಹೊಸ ಶಾಖೆಯಲ್ಲೂ ‘ಅಕ್ಷಯ ನಿಧಿ’ ಮತ್ತು ‘ಸ್ವರ್ಣ ಬಿಂದು’ ಮಾಸಿಕ ಉಳಿತಾಯ ಯೋಜನೆ ಮುಂದುವರಿಯಲಿದೆ. ಈ ಉಳಿತಾಯ ಯೋಜನೆ ಮೂಲಕ ಗ್ರಾಹಕರು ಬೋನಸ್ ಮತ್ತು ಇತರ ಲಾಭಗಳನ್ನು ಪಡೆಯಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಇನ್ನೋರ್ವ ಮಾಲಕ ಡಾ.ಅಜಿತೇಶ್ ಕೆ.ವಿ., ಹಿರಿಯ ವ್ಯವಸ್ಥಾಪಕ ಸುನೀಲ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು.