ಬಂಟ್ವಾಳ, ಅ. 25 : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಹೊಳೆನರಸೀಪುರದ ಸಂಜಯ್ (25) ಎಂಬವರು ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಉಪ್ಪಿನಂಗಡಿ ಅಡ್ಡಹೊಳೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.
ಘಟನೆಯಲ್ಲಿ ಕಾರು ಚಾಲಕ ಅರಕಲಗೂಡು ನಿವಾಸಿ ಸಂದೀಪ್, ಕಾರಿನಲ್ಲಿದ್ದ ಶೇಷ, ಮಹೇಶ್ ಅವರು ಅಪಾಯದಿಂದ ಪಾರಾಗಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಂಜಯ್ ಹಾಗೂ ಇತರರು ತಮ್ಮ ತೋಟದಲ್ಲಿ ಬೆಳೆದ ಹೂಗಳನ್ನು ಮಾರಾಟ ಮಾಡಲು ಉಡುಪಿಗೆ ಬಂದಿದ್ದರು. ಹೂವು ಮಾರಾಟ ಮಾಡಿ ವಾಪಸ್ ಮರಳುತ್ತಿದ್ದಾಗ ಈ ಘಟನೆ
ಸಂಭವಿಸಿದೆ ಎಂದು ವರದಿಯಾಗಿದೆ.











