ಮಂಗಳೂರು, ಡಿ. 13 : ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು, ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಸಂಯುಕ್ತ ಆಶ್ರಯದ ಸೌಹಾರ್ದ ಕ್ರಿಸ್ಮಸ್ ಉತ್ಸವ 2025 ಇದರ ಉದ್ಘಾಟನಾ ಕಾರ್ಯಕ್ರಮ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಶನಿವಾರ ನೆರವೇರಿತು.
ಕ್ರಿಸ್ಮಸ್ ಉತ್ಸವವನ್ನು ರಾಜ್ಯ ಮಟ್ಟದ ಸ್ಕೇಟಿಂಗ್ ಕ್ರೀಡಾಪಟು ಯುವರಾಜ್ ಡಿ. ಕುಂದರ್ ಅವರು ಕೇಕ್ ಕತ್ತರಿಸಿ ಉದ್ಘಾಟಿಸಿದರು.ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾದರ್ ಸುದೀಪ್ ಪೌಲ್ ಅವರು ಕ್ರಿಸ್ಮಸ್ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಸ್ಕೇಟಿಂಗ್ ಕ್ರೀಡಾಪಟು ಯುವರಾಜ್ ಡಿ. ಕುಂದರ್ ಅವರನ್ನು ಸನ್ಮಾನಿಸಲಾಯಿತು.
ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ ಅಧ್ಯಕ್ಷತೆ ವಹಿಸಿದ್ಧರು.ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ, ಕಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜ, ಉದ್ಯಮಿ ಸಂತೋಷ್ ಸಿಕ್ವೇರಾ, ಕೋಶಾಧಿಕಾರಿ ಡಾಲ್ಫಿ ಡಿ’ಕೋಸ್ತಾ,ಮಂಗ್ಳೂರ್ ಕ್ಯಾಥಲಿಕ್ ಸಭಾ ಮಂಗಳೂರ್ ಪ್ರದೇಶ್ ಕಾರ್ಯದರ್ಶಿ ವಿಲ್ಮಾ ಮೊಂಥೆರೋ ಉಪಸ್ಥಿತರಿದ್ದರು. ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಜಾನ್ ರೋಹನ್ ಕಾರ್ಯಕ್ರಮ ನಿರೂಪಿಸಿದರು. ಉತ್ಸವದ ಸಂಚಾಲಕ ಸ್ಟ್ಯಾನಿ ಲೋಬೊ ವಂದಿಸಿದರು.











