Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಆಗಸ್ಟ್ 7, 8 : ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ

    June 24, 2026

    ಎಂಸಿಸಿ ಬ್ಯಾಂಕಿನಿಂದ 1,535 ಕೋಟಿ ರೂಪಾಯಿ ವ್ಯವಹಾರ : ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026

    ಜೂ. 28: ನಾಗರೀಕ ಸೇವಾ ಪರೀಕ್ಷಾ ಅಕಾಂಕ್ಷಿಗಳಿಗಾಗಿ ಯುಪಿಎಸ್‌ಸಿ ಪರೀಕ್ಷೆಗೆ ‘ಮಾರ್ಗದರ್ಶಿ’ಕಾರ್ಯಕ್ರಮ

    June 23, 2026

    Subscribe to Updates

    Get the latest creative news from FooBar about art, design and business.

    What's Hot

    ಆಗಸ್ಟ್ 7, 8 : ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ

    June 24, 2026

    ಎಂಸಿಸಿ ಬ್ಯಾಂಕಿನಿಂದ 1,535 ಕೋಟಿ ರೂಪಾಯಿ ವ್ಯವಹಾರ : ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026

    ಜೂ. 28: ನಾಗರೀಕ ಸೇವಾ ಪರೀಕ್ಷಾ ಅಕಾಂಕ್ಷಿಗಳಿಗಾಗಿ ಯುಪಿಎಸ್‌ಸಿ ಪರೀಕ್ಷೆಗೆ ‘ಮಾರ್ಗದರ್ಶಿ’ಕಾರ್ಯಕ್ರಮ

    June 23, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಜೂ. 28: ನಾಗರೀಕ ಸೇವಾ ಪರೀಕ್ಷಾ ಅಕಾಂಕ್ಷಿಗಳಿಗಾಗಿ ಯುಪಿಎಸ್‌ಸಿ ಪರೀಕ್ಷೆಗೆ ‘ಮಾರ್ಗದರ್ಶಿ’ಕಾರ್ಯಕ್ರಮ
    Local News

    ಜೂ. 28: ನಾಗರೀಕ ಸೇವಾ ಪರೀಕ್ಷಾ ಅಕಾಂಕ್ಷಿಗಳಿಗಾಗಿ ಯುಪಿಎಸ್‌ಸಿ ಪರೀಕ್ಷೆಗೆ ‘ಮಾರ್ಗದರ್ಶಿ’ಕಾರ್ಯಕ್ರಮ

    adminBy adminJune 23, 2026
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು, ಜೂ. 23: ಮಂಗಳೂರು ಐಎಎಸ್, ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ರಾಮಕೃಷ್ಣ ಮಿಷನ್, ಮಂಗಳೂರು ಇವರ ಸಹಯೋಗದಲ್ಲಿ ಮಾರ್ಗದರ್ಶಿ – ಕ್ರ್ಯಾಕಿಂಗ್ ದಿ ಯುಪಿಎಸ್‌ಸಿ ಎಕ್ಸಾಮಿನೇಶನ್ ಎಂಬ ವಿಶೇಷ ನಾಗರಿಕ ಸೇವಾ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮವನ್ನು 2026ರ ಜೂನ್ 28ರಂದು ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ರೊಯ್ ಕ್ಯಾಸ್ಟೆಲಿನೊ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಪ್ರೇರಣೆ ಹಾಗೂ ಸ್ಪಷ್ಟ ದಿಕ್ಕುನಿರ್ದೇಶನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್, ಮಂಗಳೂರು ಇದರ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಅರುಣ್ ಜೇಜಿ ಚಕ್ರವರ್ತಿ, ಐಪಿಎಸ್, ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಹಾಗೂ ಮಂಗಳೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ ಶಶಿಕಾಂತ್ ಸೋಮನಾಥ್ ವಿಭೂತೆ, ಐ ಎಫ್ ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯುಪಿಎಸ್‌ಸಿ ಮಾಸ್ಟರ್ ಟ್ರೈನರ್ಗಳಾದ ಮೋಹನ್ ಕೃಷ್ಣಮೂರ್ತಿ ಹಾಗೂ ಚಂದ್ರಮೋಹನ್ ಇನಗಂಟಿ, ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ, ಮಂಗಳೂರು ಇದರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಮನಾ ಬಿ., ಜಾಗತಿಕ ಮಟ್ಟದ ಗೂಗಲ್ ಪ್ರಮಾಣಿತ ಶಿಕ್ಷಣತಜ್ಞ ಹಾಗೂ ಮೈಕ್ರೋಸಾಫ್ಟ್ ಪ್ರಮಾಣಿತ ಶಿಕ್ಷಣ ತಜ್ಞರಾದ ಡಾನ್ ಪ್ರಕಾಶ್ ಮತ್ತು ಮಂಗಳೂರು ಐಎಎಸ್ ಸಂಸ್ಥಾಪಕರಾದ ಸಂತೋಷ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

    ಯುಪಿಎಸ್‌ಸಿ ಪರೀಕ್ಷೆಯ ಮಾದರಿ, ಪರಿಣಾಮಕಾರಿ ಅಧ್ಯಯನ ತಂತ್ರಗಳು, ಸಮಯ ನಿರ್ವಹಣೆ, ಉತ್ಪಾದಕತೆ ವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳು, ತಜ್ಞರೊಂದಿಗೆ ನೇರ ಪ್ರಶ್ನೋತ್ತರ, ಪ್ರೇರಣಾತ್ಮಕ ಮಾರ್ಗದರ್ಶನ ಹಾಗೂ ವೃತ್ತಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿವೆ. ಈ ಕಾರ್ಯಕ್ರಮವು ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ರೊಯ್ ಕ್ಯಾಸ್ಟೆಲಿನೊ ಹಾಗೂ ಮಂಗಳೂರು ಐಎಎಸ್ ಸಂಸ್ಥಾಪಕರಾದ ಸಂತೋಷ್ ರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.

    ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಎಲ್ಲಾ ಅಧಿವೇಶನಗಳಿಗೆ ಪ್ರವೇಶ, ಊಟ, ಇ-ಪ್ರಮಾಣಪತ್ರ ಹಾಗೂ ಭವಿಷ್ಯದ ವಿದ್ಯಾರ್ಥಿವೇತನ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳ ಅವಕಾಶಗಳು ಲಭ್ಯವಾಗಲಿವೆ.
    ನಾಗರಿಕ ಸೇವೆ ಹಾಗೂ ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಐಎಎಸ್ ಸಂಸ್ಥಾಪಕ ಸಂತೋಷ್ ರಾವ್, ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಆ್ಯಂಡ್ ಎಜುಕೇಶನ್ ನಿರ್ದೇಶಕ ಫಾ. ರೋಶನ್ ರೊಸಾರಿಯೊ ಒ ಎಫ್ ಎಮ್ (ಸಿಎಪಿ), ಹಾಗೂ ಕಾರ್ಯದರ್ಶಿ ಆ್ಯಲ್ರನ್ ರೊಡ್ರಿಗಸ್ , ಸದಸ್ಯರಾದ ಜೆನಿಫರ್ ಜಾಸ್ಮಿನ್ ಲೋಬೋ ಉಪಸ್ಥಿತರಿದ್ದರು.

    ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸನಗಳು ಸೀಮಿತವಾಗಿರುವುದರಿಂದ ಮೊದಲಿಗೆ ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುವುದು. ನೋಂದಣಿ ಶುಲ್ಕ ರೂ. 200 ಆಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ಮತ್ತು ಸರಿಯಾದ ತಯಾರಿ ವಿಧಾನ, ಮಾರ್ಗದರ್ಶನ ಹಾಗೂ ಸ್ಪಷ್ಟತೆಯನ್ನು ಅಭ್ಯರ್ಥಿಗಳಿಗೆ ಒದಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News June 24, 2026

    ಆಗಸ್ಟ್ 7, 8 : ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ

    Local News June 24, 2026

    ಎಂಸಿಸಿ ಬ್ಯಾಂಕಿನಿಂದ 1,535 ಕೋಟಿ ರೂಪಾಯಿ ವ್ಯವಹಾರ : ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    Local News June 23, 2026

    ಕರಾವಳಿಯತ್ತ ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ : ಮಂಗಳೂರಿನಲ್ಲಿ ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮ

    Local News June 23, 2026

    ಮಂಗಳೂರು : ಕದ್ರಿ ಕಂಬಳದಲ್ಲಿ ಮಾವು-ಹಲಸು ಮೇಳ

    Local News June 22, 2026

    ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ 12ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ

    Local News June 21, 2026

    ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭ

    Comments are closed.

    Demo
    Don't Miss
    Local News June 24, 2026

    ಆಗಸ್ಟ್ 7, 8 : ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ

    ಮಂಗಳೂರು, ಜೂ. 24 : ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ 2007ರಲ್ಲಿ ಆರಂಭಗೊಂಡ ಆಳ್ವಾಸ್ ಪ್ರಗತಿ ಬೃಹತ್…

    ಎಂಸಿಸಿ ಬ್ಯಾಂಕಿನಿಂದ 1,535 ಕೋಟಿ ರೂಪಾಯಿ ವ್ಯವಹಾರ : ಬ್ಯಾಂಕಿನ 22 ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

    June 24, 2026

    ಜೂ. 28: ನಾಗರೀಕ ಸೇವಾ ಪರೀಕ್ಷಾ ಅಕಾಂಕ್ಷಿಗಳಿಗಾಗಿ ಯುಪಿಎಸ್‌ಸಿ ಪರೀಕ್ಷೆಗೆ ‘ಮಾರ್ಗದರ್ಶಿ’ಕಾರ್ಯಕ್ರಮ

    June 23, 2026

    ಕರಾವಳಿಯತ್ತ ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ : ಮಂಗಳೂರಿನಲ್ಲಿ ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮ

    June 23, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.