ಮಂಗಳೂರು: ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನೆಮಾ ಕರಾವಳಿಯಾದ್ಯಂತ ಮೇ20 ಶುಕ್ರವಾರದಂದು ತೆರೆಕಂಡಿದೆ. ಮಂಗಳೂರಿನ ಬಿಗ್ ಸಿನೆಮಾ,ಪಿವಿಆರ್,ರೂಪವಾಣಿ ಸುರತ್ಕಲ್ನ ನಟರಾಜ್ ,ಸಿನೆಗ್ಯಾಲಕ್ಸಿ, ಉಡುಪಿಯ ಕಲ್ಪನಾ,ಭಾರತ್ ಸಿನೆಮಾಸ್ ಮಣಿಪಾಲದ ಐನಾಕ್ಸ್ ಮೂಡುಬಿದಿರೆಯ ಅಮರಾಶ್ರೀ,ಕಾರ್ಕಳದ ಪ್ಲಾನೆಟ್,ರಾಧಿಕಾ ಬೆಳ್ತಂಗಡಿಯ ಭಾರತ್,ಪುತ್ತೂರಿನ ಅರುಣಾ,ಸುಳ್ಯದ ಸಂತೋಷ್ ಕೊಪ್ಪದ ಜೆಎಂಜೆ,ಕಾಸರಗೋಡಿನ ಕೃಷ್ಣಾಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಮಂಗಳೂರಿನ ಭಾರತ್ ಮಾಲ್ನಬಿಗ್ ಸಿನೆಮಾಸ್ ನಲ್ಲಿ ಸಿನೆಮಾ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶಾಸಕರಾದ ವೇದವ್ಯಾಸ ಕಾಮತ್,ಯು.ಟಿ,ಖಾದರ್,ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್,ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಜಯ ಕುಮಾರ್ ಕೊಡಿಯಲ್ ಬೈಲ್,ಸತೀಶ್ ಕುಂಪಲ,ನವೀನ್ ಡಿ.ಪಡೀಲ್,ಭೋಜರಾಜ್ ವಾಮಂಜೂರು,ದೇವದಾಸ್ ಕಾಪಿಕಾಡ್,ಅರಂವಿದ್ ಬೋಳಾರ್,ಡಾ| ಅಣ್ಣಯ್ಯ ಕುಲಾಲ್,ಶೈಲಾಶ್ರೀ ಮೂಲ್ಕಿ,ಜಗನ್ನಾಥ ಶೆಟ್ಟಿ ಬಾಳ,ಪದ್ಮರಾಜ್ ಕುದ್ರೋಳಿ,ಯತೀಶ್ ಬೈಕಂಪಾಡಿ,ಬಾಲಕೃಷ್ಣ ಶೆಟ್ಟಿ,ಮಮತಾ ಗಟ್ಟಿ,ಪ್ರಕಾಶ್ ಪಾಂಡೇಶ್ವರ,ಅಜು೯ನ್ ಕಾಪಿಕಾಡ್, ಶಮಿ೯ಳಾ ಕಾಪಿಕಾಡ್,ತಮ್ಮ ಲಕ್ಷಣ,ನಟ ವಿನೀತ್ ಉಪಸ್ಥಿತರುದ್ದರು.