ಸುರತ್ಕಲ್, ಮೇ. 01: ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಲಾಯಿತು. ಜೆಡಿಎಸ್ ಸರಕಾರದ ಅವಧಿಯಲ್ಲಿ ಮಹಿಳೆಯರಿಗೆ ಸ್ವಾವಲಂಬನೆ ಸಿಕ್ಕಿತು, ರೈತರ ಸಾಲ ಮನ್ನಾ ಆಗಿ ರೈತರಿಗೆ ನೆಮ್ಮದಿಯ ಜೀವನ ಸಿಕ್ಕಿತು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಿಂದಿನ ಶಾಸಕ ಮೊಯ್ದಿನ್ ಬಾವ ಅವರ ಅವಧಿಯಲ್ಲಿ ಆಗಿವೆ. ಭತ್ತದ ತೆನೆ ಹೊತ್ತ ಚಿಹ್ನೆ ಗೆ ಮತ ಕೊಟ್ಟು ಹರಸಿ. ಜೆಡಿಎಸ್ ಪಕ್ಷದ ಅಭ್ಯರ್ಥಿ ಮೊಯ್ದಿನ್ ಬಾವಾ ಅವರನ್ನು ಗೆಲ್ಲಿಸಿ ಎಂದರು.