ಮಂಗಳೂರು, ನ. 23 : ಲಾಡ್ಜ್ ನ ರೂಮ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಕ್ತಿಯೊಬ್ಬ ಸಾವನಪ್ಪಿರುವ ಘಟನೆ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ನಡೆದಿದೆ .
ಮೃತರನ್ನು ಯಶರಾಜ್ ಸುವರ್ಣ(43) ಎಂದು ಗುರುತಿಸಲಾಗಿದೆ.
ನಗದರ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬೆಂಕಿ ಹತ್ತಿಕೊಂಡಿದೆ. ಯಶರಾಜ್ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿತ್ತು ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.