ನವದೆಹಲಿ, ಏ. 07 : ವಿಪ್ರೋ ಕಂಪೆನಿಯ ಸಿಇಒ, ಎಂ.ಡಿ. ಥಿಯೆರ್ರಿ ಡೆಲಾಪೋರ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಶ್ರೀನಿವಾಸ್ ಪಲ್ಲಿಯಾ ಅವರು ಆಯ್ಕೆ ಮಾಡಲಾಗಿದೆ.
ಶ್ರೀನಿವಾಸ್ ಪಲ್ಲಿಯಾ ಅವರು ವಿಪ್ರೋ ಕಂಪನಿಯ ಅಮೇರಿಕಾಸ್ 1 ಪ್ರದೇಶದ ಸಿಇಒ ಆಗಿರುವ ಅವರು ಇಂದಿನಿಂದ ನೂತನ ಸಿಇಒ, ಎಂ.ಡಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಡೆಲಾಪೋರ್ಟೆ ಅವರು 2020ರ ಜುಲೈಯಲ್ಲಿ ವಿಪ್ರೋದ ಸಿಇಒ ಮತ್ತು ಎಂಡಿ ಆಗಿ ನೇಮಕಗೊಂಡಿದ್ದರು. ಡೆಲಾಪೋರ್ಟೆ ಅವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ವಾರ್ಷಿಕ 82 ಕೋಟಿ ರೂ. ಗಿಂತ ಅಧಿಕ ವೇತನ ಪ್ಯಾಕೇಜ್ ಹೊಂದಿದ್ದರು. ಈ ಮೂಲಕ ಡೆಲಾಪೋರ್ಟೆ ಅವರು ಭಾರತೀಯ ಐಟಿ ವಲಯದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಸಿಇಒ ಆಗಿದ್ದರು ಎಂದು ಹೇಳಲಾಗಿದೆ.