ಬಂಟ್ವಾಳ, ಮೇ. 22 : : ಕಾರೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮಾಜಿ ಸೈನಿಕ ಮೃತಪಟ್ಟ ಘಟನೆ ಮಂಚಿ ಸಮೀಪದ ಮೋಂತಿಮರದ ಕಾರ್ಯಪಡ್ಪು ಎಂಬಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಪುತ್ತೂರು ನೆಹರು ನಗರದ ಶ್ರೀ ರಕ್ತೇಶ್ವರಿ ಗುಡಿ ಬಳಿಯ ನಿವಾಸಿ ಚಿದಾನಂದ ಕಾಮತ್ ಎಂದು ಗುರುತಿಸಲಾಗಿದೆ.
ಚಿದಾನಂದ ಕಾಮತ್ ಅವರು ಸ್ಕೂಟರ್ ನಲ್ಲಿ ಸಾಲೆತ್ತೂರಿನಿಂದ ಮುಡಿಪುವಿಗೆ ತೆರಳುತ್ತಿದ್ದ ವೇಳೆ ಅತಿವೇಗದಿಂದ ಚಲಿಸಿ ಬಂದ ಕಾರು ಸ್ಕೂಟರ್ಗೆ ಢಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಚಿದಾನಂದ ಕಾಮತ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಕೂಟರ್ಗೆ ಢಿಕ್ಕಿ ಹೊಡೆದ ಕಾರು ಸ್ಥಳದಿಂದ ಪರಾರಿಯಾಗಿದೆ.
ಬಂಟ್ವಾಳ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.