ಮಂಗಳೂರು ಆ. 7 : ನಗರದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಇಎನ್‌ಟಿ, ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ‘ಐಎಓಎಚ್‌ಎನ್‌ಎಸ್ 2024 ಮಂಗಳೂರು’ ಇಂಡಿಯನ್ ಅಕಾಡೆಮಿ ಆಫ್ ಓಟೋರಿಗೋಲಾರಿಂಗೋಲಜಿ ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆಯ 10 ನೇ ರಾಷ್ಟ್ರೀಯ ಸಮ್ಮೇಳನವನ್ನು ಮಂಗಳೂರಿನ ಡಾ| ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ನನ್ ಸೆಂಟರ್‌ನಲ್ಲಿ ಆ. 8 ರಿಂದ 11 ವರೆಗೆ ಆಯೋಜಿಸಲಾಗಿದೆ ಎಂದು ಕೆಎಂಸಿ ಮಂಗಳೂರು ಇದರ ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ದೇವಿಪ್ರಸಾದ್ ಹೇಳಿದರು.
ಪತ್ರಿಕಾಭವನ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಓಟೊರಿನೊಲಾರಿಂಗೋಲಜಿ ಟುವರ್ಡ್ಸ್ ಅಕಾಡೆಮಿಕ್ ಮತ್ತು ರಿಸರ್ಚ್ ಎಕ್ಸಲೆನ್ಸ್ 2024′ ನಡೆಯುವ ಈ ವಿಷಯದಲ್ಲಿ ಸಮ್ಮೇಳನದಲ್ಲಿ ದೇಶವಿದೇಶಗಳ ಸುಮಾರು 400ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆ. 9ರಂದು ಸಂಜೆ 7ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ನ ಪ್ರೊ ಚಾನ್ಸಿಲ ಡಾ| ಎಚ್.ಎಸ್. ಬಳ್ಳಾಲ್, ಕೆಎಂಸಿ ಡೀನ್ ಡಾ| ಉನ್ನಿಕೃಷ್ಣನ್, ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ| ಎಂ.ಡಿ. ವೆಂಕಟೇಶ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಂಸಿ ಮಂಗಳೂರು ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ದೇವಿಪ್ರಸಾದ್, ಸಂಘಟನ ಸಮಿತಿಯ ಡಾ| ಮನೀಷಾ, ಮಾಧ್ಯಮ ಸಮಿತಿಯ ಮುಖ್ಯಸ್ಥೆ ಡಾ| ಕಿರಣ ಉಪಸ್ಥಿತರಿದ್ದರು.