ಮಂಗಳೂರು , ಆ.16: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ , ತುಳುಭವನದಲ್ಲಿ ‘ಆಟಿದ ಗೇನ’ ಕಾರ್ಯಕ್ರಮ ಆ.4,ಭಾನುವಾರ ನಡೆಯಿತು.
ಆಟಿದ ಗೇನ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಮತ್ತುಸಾರ್ವಜನಿಕ ಸಂಪರ್ಕ ಇಲಾಖೆ ಸಹಾ ಯಕ ನಿರ್ದೇಶಕ ಬಿ.ಎ ಖಾದರ ಅವರು ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಇಂದಿನ ಆಧುನಿಕತೆಯ ನಡುವೆಯೂ ತುಳು ನಾಡಿನ ಹಲವಾರು ಸಂಸ್ಕೃತಿಗಳು ಇನ್ನೂಉಳಿದುಕೊಂಡಿದೆ. ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡಬೇಕಾದ ಅವಶ್ಯಕತೆಯಿದೆ ಎಂದರು.
ತುಳು ಸಾಹಿತಿ, ಡಾ|| ಇಂದಿರಾ ಹೆಗ್ಗಡೆ ಅವರು ಮಾತನಾಡಿ, ಆಟಿ ಅಂದರೆ ಅನಿಷ್ಟದ ತಿರುಳು ಎಂದು ಪರಿಗಣಿತ. ಧಾರ್ಮಿಕ ಇತರೇ ಶುಭ ಸಮಾರಂಭಗಳು ನಡೆಯುವುದು ಕಡಿಮೆ. ಈ ವೇಳೆ ಭೂಮಿಗೆ ಬಿತ್ತುವ ಹಾಗೆ ಇಲ್ಲ ಆಟಿ ತಿಂಗಳು ನಿಧಾನವಾಗಿ ಸಾಗಿದರೆ ಸೋಣ ತಿಂಗಳು ಕುದುರೆಯಂತೆ ಓಡುತ್ತದೆ ಎಂಬ ಮಾತಿದೆ. ಹಿಂದಿನ ಕಾಲದಲ್ಲಿ ಆಟಿ ದಿನಗಳು ಕಷ್ಟಕರವಾಗಿದ್ದವು. ಅಂದಿನ ದಿನಗಳನ್ನು ನೆನಪಿಸುವ ಸಲುವಾಗಿ ಈ ಆಟಿದ ದಿನ ಕಾರ್ಯಕ್ರಮಗಳನ್ನು ಅಲ್ಲಲ್ಲಿಆಚರಿಸುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ , ಅಕಾಡೆಮಿಯು ತುಳುನಾಡಿನ ವಿವಿಧ ಮೂಲ ಸಮುದಾಯಗಳ ಸಾಂಸ್ಕೃತಿಕ ಆಯಾಮ, ಆಚಾರ , ವಿಚಾರ, ಸಂಪ್ರದಾಯಗಳ ಬಗ್ಗೆ ದಾಖಲೀಕರಣ ಮಾಡುವ ಉದ್ದೇಶವಿರಿಸಿಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಕೃಷಿ ಕಸುಬಿನ ಮಹಿಳೆಯರಾದ ಲೀಲಾ, ಸುರ್ಯೆದಿ, ಮೋಹಿನಿ, ಇಂದಿರಾ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ತುಳು ಅಕಾಡೆಮಿ ಸದಸ್ಯ ರೋಹಿತ್ ಉಳ್ಳಾಲ್ , ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ರವಿ ಕುದ್ಮುಲ್ ಗಾರ್ಡನ್, ಶ್ವಾಸಕೋಶ ತಜ್ಞೆ ಡಾ.ಅಲ್ಕಾ ಸಿ.ಭಟ್ , ಲತಾ ಎಸ್.ಬಿ., ಚಂದ್ರ ಪ್ರಭಾ ಶೇಖರ್ , ಅನಿತಾ ದಯಾಕರ್ , ರತ್ನಾವತಿ ರಂಜನ್ , ಚೈತ್ರ ಮುಲ್ಲಕಾಡ್ ಉಪಸ್ಥಿತರಿದ್ದರು.