ಮಂಗಳೂರು, ಸೆ.5 : ಅಳಕೆಯ ಮಲ್ಯ ಆರ್ಕೇಡ್‌ನಲ್ಲಿ ಶ್ರೇಯಾಸ್ ಸ್ವೀಟ್ಸ್ ನ ನವೀಕೃತ, ಹವಾನಿಯಂತ್ರಿತ ಮಳಿಗೆ ಬುಧವಾರ ಆರಂಭಗೊಂಡಿತು.
ಶ್ರೇಯಾಸ್ ಸ್ವೀಟ್ಸ್ ನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, 22 ವರ್ಷಗಳಿಂದ ಶ್ರೇಯಾಸ್ ಸ್ವೀಟ್ಸ್ ಉತ್ತಮ ಸೇವೆ ನೀಡುತ್ತಾ ಬಂದಿದೆ. ಜನರಿಗೆ ಆರೋಗ್ಯಕರ ತಿನಿಸುಗಳನ್ನು ಪೂರೈಸಿದೆ. ಗುಣಮಟ್ಟ ಕಾಯ್ದುಕೊಂಡ ಕಾರಣ ಶ್ರೇಯಾಸ್ ಸ್ವೀಟ್ಸ್ ತಿನಿಸುಗಳನ್ನು ಜನ ಖುಷಿ ಪಡುತ್ತಾರೆ ಎಂದರು.
ಮಾಲಕ ರಮೇಶ್ ಮಲ್ಯ ಮಾತನಾಡಿ, ಶ್ರೇಯಾಸ್ ಸ್ವೀಟ್ಸ್ ಅನ್ನು 2002ರಲ್ಲಿ ಜಿ.ಎಚ್.ಎಸ್. ರಸ್ತೆಯಲ್ಲಿ ಆರಂಭಿಸಲಾಗಿದ್ದು, 22 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸಿಹಿ ತಿಂಡಿಗಳನ್ನು ಪೂರೈಸಿದ್ದೇವೆ. ಉತ್ತರ ಭಾರತೀಯ, ಬಂಗಾಲಿ ಸಿಹಿ ತಿಂಡಿಗಳು, ಗೋಲ್ಡ್ ಸೀಟ್ಸ್ ಚಾಟ್ಸ್, ಮಿಕ್ಸರ್, ವಿವಿಧ ಕರಿದ ತಿಂಡಿಗಳು, ಬಿಸಿ ಮೈಸೂರು ಪಾಕ್, ಸ್ವೀಟ್ಸ್ ಗಳ ಗಿಫ್ಟ್ ಪ್ಯಾಕ್, ಡ್ರೈಫ್ರುಟ್ಸ್ ಲಭ್ಯವಿದ್ದು, ಎಲ್ಲದಕ್ಕೂ ಪ್ರತ್ಯೇಕ ಕೌಂಟರ್‌ಗಳಿವೆ. ಗ್ರಾಹಕರಿಗೆ ಪ್ರಿಯವಾದ ಸಿಹಿತಿಂಡಿಗಳು, ಉತ್ತಮ ಬೆಲೆಯಲ್ಲಿ ನಮ್ಮಲ್ಲಿ ದೊರೆಯುತ್ತದೆ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯೆ ಜಯಶ್ರೀ ಕುಡ್ವ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಸಕ ವೇದವ್ಯಾಸ್ ಕಾಮತ್ ವೆಬ್‌ಸೈಟ್ ಗೆ ಚಾಲನೆ ನೀಡಿದರು.
ಉದ್ಯಮಿಗಳಾದ ಸುಧಾಕರ ಕಾಮತ್, ಶಿವಕುಮಾರ್ ಶರ್ಮ, ನರೇಶ್ ಶೆಣೈ, ನರೇಶ್ ಪ್ರಭು, ಗುರುಪ್ರಸಾದ್, ಕಾಮತ್, ಚೇತನ್ ಕಾಮತ್, ದೀಪಕ್ ಶೆಣೈ ವಾಶಿ, ಮಳಿಗೆಯ ಪ್ರಮುಖರಾದ ಶ್ರೇಯಾ ಮಲ್ಯ, ಶಿಖಾ ಮಲ್ಯ, ವರದ್ ನಾಯಕ್, ಕೆಸಿಸಿಐ ಮಾಜಿ ಅಧ್ಯಕ್ಷ ಮುರಳೀಧರ ರಮಣಿ, ಐಸಿಐಸಿಐ ಬ್ಯಾಂಕ್ ಅಧಿಕಾರಿ ಗಿರಿರಾಜ್, ಎಂಆರ್ ಪಿಎಲ್ ಅಧಿಕಾರಿ ವಲ್ಲಭ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಎನ್. ರಮೇಶ್ ಮಲ್ಯ, ಎನ್. ಆಶಾ ಮಲ್ಯ ಸ್ವಾಗತಿಸಿದರು.