ಉಡುಪಿ, ನ.17 : ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮುರುಡೇಶ್ವರ ಹೈವೇ ಹೊಟೇಲ್ ಎದುರುಗಡೆ ರೈಲ್ವೇ ಹಳಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಹೇರೂರಿನ ಕೆಪಿಟಿಸಿಎಲ್ ಸಬ್ ಸ್ಟೇಶನ್ ಎದುರುಗಡೆ ನಿವಾಸಿ ಸಂದೀಪ ಕೆ.ಆರ್. (44) ಎಂದು ಗುರುತಿಸಲಾಗಿದೆ.
ಸಂದೀಪ ಅವರು ಯಾವುದೋ ಕಾರಣಕ್ಕಾಗಿ ಮುರುಡೇಶ್ವರ ಹೈವೇ ಹೊಟೇಲ್ ಎದುರಿರುವ ರೈಲ್ವೇ ಹಳಿಯ ಹತ್ತಿರ ಹೋಗುತ್ತಿದ್ದ ವೇಳೆ ಬೆಂಗಳೂರು-ಮೈಸೂರುನಿಂದ ಮುರುಡೇಶ್ವರಕ್ಕೆ ಸಾಗುತ್ತಿದ್ದ ರೈಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.