Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ 11ನೇ ಅಂತರಾಷ್ಟ್ರೀಯ ಯೋಗ  ದಿನಾಚರಣೆ ಆಚರಣೆ

    June 21, 2025

    ಜೂ.21-22 : ಬೆಂದೂರ್‌ವೆಲ್ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ‘ಕುಡ್ಲ ಪೆಲಕಾಯಿ ಪರ್ಬ’

    June 20, 2025

    ಇಸ್ರೇಲ್- ಇರಾನ್ ಸಂಘರ್ಷ ; ಇಸ್ರೇಲ್ ಮಿಸೈಲ್ ದಾಳಿಗೆ ಇರಾನಿನ 14 ಅಧಿಕಾರಿಗಳು ಸಾವು

    June 19, 2025

    Subscribe to Updates

    Get the latest creative news from FooBar about art, design and business.

    What's Hot

    ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ 11ನೇ ಅಂತರಾಷ್ಟ್ರೀಯ ಯೋಗ  ದಿನಾಚರಣೆ ಆಚರಣೆ

    June 21, 2025

    ಜೂ.21-22 : ಬೆಂದೂರ್‌ವೆಲ್ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ‘ಕುಡ್ಲ ಪೆಲಕಾಯಿ ಪರ್ಬ’

    June 20, 2025

    ಇಸ್ರೇಲ್- ಇರಾನ್ ಸಂಘರ್ಷ ; ಇಸ್ರೇಲ್ ಮಿಸೈಲ್ ದಾಳಿಗೆ ಇರಾನಿನ 14 ಅಧಿಕಾರಿಗಳು ಸಾವು

    June 19, 2025
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»27ನೇ ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
    Local News

    27ನೇ ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

    adminBy adminFebruary 17, 2025
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು, ಫೆ.17 : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಫೆ. 21, 22 ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 27 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಹಿರಿಯ ಸಾಹಿತಿಗಳಾದ ಡಾ. ಪ್ರಭಾಕರ ಶಿಶಿಲ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. 21ನೇ ತಾರೀಕಿನಂದು ಬೆಳಗ್ಗೆ 8.45 ಕ್ಕೆ ಅಸೈಗೋಳಿಯ ಕೇಂದ್ರ ಮೈದಾನದಿಂದ ಕನ್ನಡ ಸಾಂಸ್ಕೃತಿಕ ದಿಬ್ಬಣ ಆಗಮಿಸಲಿದೆ. ಪದ್ಮಶ್ರೀ ಹರೇಕಳ ಹಾಜಬ್ಬ ಇವರು ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. 10 ಗಂಟೆಗೆ ಸರಿಯಾಗಿ ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭವು ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿಗಳಾಗಿರುವ ಡಾ. ಪ್ರಭಾಕರ ಶಿಶಿಲ ಉಪಸ್ಥಿತರಿರುತ್ತಾರೆ. ಹಿರಿಯ ಕವಿಗಳಾಗಿರುವ ಸನ್ಮಾನ್ಯ ಬಿ ಆರ್ ಲಕ್ಷ್ಮಣ ರಾವ್ ಬೆಂಗಳೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ವಿಧಾನಸಭಾ ಅಧ್ಯಕ್ಷರು ಉಳ್ಳಾಲ ತಾಲೂಕಿನ ಶಾಸಕರೂ ಆಗಿರುವ ಸನ್ಮಾನ್ಯ ಯು ಟಿ ಖಾದರ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಸ್ತುಪ್ರದರ್ಶನದ ಉದ್ಘಾಟನೆಯನ್ನು, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ ಪುಸ್ತಕ ಮತ್ತು ಇತರ ಮಳಿಗೆಗಳ ಉದ್ಘಾಟನೆಯನ್ಬು ನೆರವೇರಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿರುವ ಭುವನೇಶ್ವರಿ ಹೆಗಡೆ ಉಪಸ್ಥಿತರಿರುತ್ತಾರೆ ಎಂದು ದ. ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್  ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಅವರು ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಡಾ. ಎಂ.ಪಿ. ಶ್ರೀನಾಥ ಆಶಯ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸದಾಶಿವ ಉಳ್ಳಾಲ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕಸಾಪದ ಮಾಜಿ ರಾಜ್ಯಾಧ್ಯಕ್ಷರಾಗಿರುವ ಧರ್ಮದರ್ಶಿ ಹರಿಕೃಷ್ಣ ಪುನರೂರು, ರೋಹನ್ ಕಾರ್ಪೊರೇಷನ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾಗಿರುವ ರೋಹನ್ ಮೊಂತೆರೋ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಆನಂದ್ ಕೆ (ಭಾ. ಆ. ಸೇ.), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ, ದ.ಕ.ಜಿಲ್ಲಾ ಕಸಾಪ ಇದರ ನಿಕಟಪೂರ್ವ ಅಧ್ಯಕ್ಷ ಎಸ್ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಕಸಾಪ ಕೇರಳ ಗಡಿನಾಡ ಘಟಕ ಇದರ ಅಧ್ಯಕ್ಷರಾಗಿರುವ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಇವರು ಉಪಸ್ಥಿತರಿರುತ್ತಾರೆ ಎಂದರು.

    ನಂತರ ನಡೆಯುವ ನೂತನ ಕೃತಿಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಒಟ್ಟು 18 ಕೃತಿಗಳು ಬಿಡುಗಡೆಗೊಳ್ಳಲಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿರುವ ರಾಜು ಮೊಗವೀರ ಕೆ ಎ ಎಸ್ ಇವರು ಇದನ್ನು ನಡೆಸಿಕೊಡಲಿದ್ದಾರೆ. ನಂತರ ಕುದ್ಮಲ್ ರಂಗರಾಯರ ಬಗೆಗಿನ ವಿಶೇಷೋಪನ್ಯಾಸದಲ್ಲಿ ಶ್ರೀದೇವಿ ಕೆ ಪುತ್ತೂರು, ಕರಾವಳಿಯ ಲೋಕದೃಷ್ಟಿ ಎಂಬ ವಿಷಯದ ಬಗೆಗಿನ ಗೋಷ್ಠಿಯಲ್ಲಿ ಡಾ. ವರದರಾಜ ಚಂದ್ರಗಿರಿ, ಡಾ. ಕುಮಾರಸ್ವಾಮಿ ಹೆಚ್, ಜಬ್ಬಾರ್ ಸಮೊ ಸಂಪಾಜೆ ಭಾಗವಹಿಸಲಿದ್ದಾರೆ. ನಂತರ ನಡೆಯಲಿರುವ ಅಗಲಿದ ಗಣ್ಯರಿಗೆ ನುಡಿನಮನ ಹಾಗೂ ನೆನಪು ಕಾರ್ಯಕ್ರಮದಲ್ಲಿ ಯಕ್ಷಗಾನದ ಮೊದಲ ಮಹಿಳಾ ಭಾಗವತರಾಗಿದ್ದ ಲೀಲಾವತಿ ಬೈಪಾಡಿತ್ತಾಯ ಇವರ ಬಗೆಗೆ ಕದ್ರಿ ನವನೀತ ಶೆಟ್ಟಿ ನುಡಿನಮನವನ್ನು, ಶಾಲಿನಿ ಹೆಬ್ಬಾರ್ ಮತ್ತು ಹೇಮ ಸ್ವಾತಿ ಕುರಿಯಾಜೆ ಇವರು ಗಾನ ನಮನವನ್ನು ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

    ನಂತರ ನಡೆಯುವ ಭಾಷಾ ಬಾಂಧವ್ಯ ದ ಸಂವಾದ ಗೋಷ್ಠಿಯಲ್ಲಿ ಡಾ. ಮಾಧವ ಎಂ ಕೆ, ಮಹಮ್ಮದ್ ಅಲಿ ಕಮ್ಮರಡಿ, ಮಿಲನ ಭರತ್ ಭಗಾಮಂಡಲ, ಕಲ್ಲಚ್ಚು ಮಹೇಶ್ ಇವರು ಮಾತನಾಡಲಿದ್ದಾರೆ. ಸಮ್ಮೇಳನದ ಎರಡನೇ ದಿನವಾದ ಶನಿವಾರ ಪ್ರಥಮ ಗೋಷ್ಠಿಯಾಗಿ ಹಿರಿಯರ ಕುರಿತು ಯುವ ಚಿಂತನೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಚೇತನ್ ಮುಂಡಾಜೆ, ಮಹಮ್ಮದ್ ಮಿಕ್ ದಾದ, ಫಾತಿಮತ್ ರಫೀದಾ ಇವರು ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳಲಿದ್ದಾರೆ. ನಂತರ ಸಾಹಿತಿ ಸಾಹಿತ್ಯ ರಸ ಪ್ರಸಂಗಗಳು ಎಂಬ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು ಡಾ ಜಯಪ್ರಕಾಶ್ ಮಾವಿನಕುಳಿ, ಬಿ ಎಂ ಹನೀಫ್ ಬೆಂಗಳೂರು, ನರೇಂದ್ರ ರೈ ದೇರ್ಲ ಇವರು ಭಾಗವಹಿಸಲಿದ್ದಾರೆ. ರಾಣಿ ಅಬ್ಬಕ್ಕನ ಕುರಿತಾದ ವಿಶೋಪನ್ಯಾಸವನ್ನು ಹಮ್ಮಿಕೊಂಡಿದ್ದು ಡಾ. ತುಕಾರಾಂ ಪೂಜಾರಿ ಉಪನ್ಯಾಸವನ್ನು ನೀಡಲಿದ್ದಾರೆ.

    ಸನ್ಮಾನ ಸಮಾರಂಭ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ಲೇಖಕ ಜೋಗಿ (ಗಿರೀಶ್ ರಾವ್ ಉಪ್ಪಿನಂಗಡಿ) ಸಮಾರೋಪ ಭಾಷಣವನ್ನು ಮಾಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ ಆಳ್ವ 14 ಮಂದಿ ಹಿರಿಯ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸನ್ಮಾನ್ಯ ಯು ಟಿ ಖಾದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿರುವ ಶುವರಾಜ್ ಸಂಗಪ್ಪ ತಂಗಡಗಿ, ಮಂ.ವಿ.ವಿ. ಕುಲಪತಿ ಪ್ರೊ.ಪಿ.ಎಲ್. ಧರ್ಮ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ, ಉಡುಪಿ ಜಿಲ್ಲಾ ಕಸಾಪದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಂ.ವಿ.ವಿ. ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೊಂಗಳ್ಳಿ ಉಪಸ್ಥಿತರಿರುತ್ತಾರೆ ಎಂದರು.

    ಎರಡು ದಿನದ ಸಮ್ಮೇಳನದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ, ಸನಾತನ ನಾಟ್ಯಾಲಯ ಮಂಗಳೂರು, ಭಾರತೀ ಗೋಪಾಲ್ ಶಿವಪುರ, ರೇಷ್ಮಾ ನಿರ್ಮಲ ಭಟ್ ಬಳಗ, ಕೊಳಲು ಸಂಗೀತ ವಿದ್ಯಾಲಯ ಇರಾ, ಭಾರತೀ ನೃತ್ಯಾಲಯ ಮುಡಿಪು,ನಿನಾದ ಸಾಂಸ್ಕೃತಿಕ ಕೇಂದ್ರ ಬೆಳ್ಳಾರೆ, ಸುಚಿತ್ರಾ ಹೊಳ್ಳ ಗಾಯನ, ಶ್ರುತಕೀರ್ತಿ ರಾಜ ಬಳಗದಿಂದ ಯಕ್ಷಗಾನ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ  ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಕುಂಬ್ಳೆ, ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಕೋಶಾಧಿಕಾರಿ ಲ ಚಂದ್ರಹಾಸ ಶೆಟ್ಟಿ, ಮಾಧ್ಯಮ ಸಮಿತಿ ಅಧ್ಯಕ್ಷ ವಸಂತ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.

     

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News June 21, 2025

    ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ 11ನೇ ಅಂತರಾಷ್ಟ್ರೀಯ ಯೋಗ  ದಿನಾಚರಣೆ ಆಚರಣೆ

    Local News June 20, 2025

    ಜೂ.21-22 : ಬೆಂದೂರ್‌ವೆಲ್ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ‘ಕುಡ್ಲ ಪೆಲಕಾಯಿ ಪರ್ಬ’

    Local News June 18, 2025

    ದ.ಕ., ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವರ್ಗಾವಣೆ : ದ.ಕ. ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ , ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ನೇಮಕ

    Local News June 18, 2025

    ಜೂ. 19- 22 : ಪೊಸೋಟ್ ತಂಙಳ್ ಉರೂಸ್: ಮಳ್‌ಹರ್ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬ

    Local News June 17, 2025

    ಮಂಗಳೂರು : ನಂತೂರ್ ಬಳಿ ರಸ್ತೆ ಅಪಘಾತ – ಕೇರಳ ಮೂಲದ ವೈದ್ಯ ಸಾವು

    Local News June 13, 2025

    ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಿಎ ವಿದ್ಯಾರ್ಥಿಗಳ ಮೆಗಾ ಸಮ್ಮೇಳನ

    Comments are closed.

    Demo
    Don't Miss
    Local News June 21, 2025

    ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ 11ನೇ ಅಂತರಾಷ್ಟ್ರೀಯ ಯೋಗ  ದಿನಾಚರಣೆ ಆಚರಣೆ

    ಮಂಗಳೂರು, ಜೂ. 21 : ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ 11ನೇ ಅಂತರಾಷ್ಟ್ರೀಯ ಯೋಗ  ದಿನಾಚರಣೆಯನ್ನು ಇಂದು…

    ಜೂ.21-22 : ಬೆಂದೂರ್‌ವೆಲ್ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ‘ಕುಡ್ಲ ಪೆಲಕಾಯಿ ಪರ್ಬ’

    June 20, 2025

    ಇಸ್ರೇಲ್- ಇರಾನ್ ಸಂಘರ್ಷ ; ಇಸ್ರೇಲ್ ಮಿಸೈಲ್ ದಾಳಿಗೆ ಇರಾನಿನ 14 ಅಧಿಕಾರಿಗಳು ಸಾವು

    June 19, 2025

    ದ.ಕ., ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವರ್ಗಾವಣೆ : ದ.ಕ. ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ , ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ನೇಮಕ

    June 18, 2025
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2025 All Right Reserved. Designed by Blueline Computers.

    Type above and press Enter to search. Press Esc to cancel.