ಬೆಂಗಳೂರು ಜೂ,7 : ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್ ಅವರ ಮುಂದಿನ ಚಿತ್ರ ‘ಕಟ್ಟಾಳನ್’ ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕ ಪೌಲ್ ಜಾರ್ಜ್ ನಿರ್ದೇಶನದ ಮತ್ತು ಷರೀಫ್ ಮುಹಮ್ಮದ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರದಲ್ಲಿ ನಾಯಕ ನಟನಾಗಿ ಆಂಟನಿ ವರ್ಗೀಸ್ ನಟಿಸಿದ್ದಾರೆ,
ಅರಣ್ಯದ ಆಳದಲ್ಲಿ ವಿಧಿಯ ಹೋರಾಟದಲ್ಲಿ ಸಿಲುಕಿರುವ ಒಬ್ಬ ಅಪ್ಪಟ ಮಾನವನ ಪಾತ್ರದಲ್ಲಿ ನಟಿಸಿದ್ದಾರೆ, ಪುಷ್ಪಾ’ ಮತ್ತು ‘ಜೈಲರ್’ ಚಿತ್ರದ ನಂತರ ಸುನೀಲ್ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ. ಇಲ್ಲಿ ಅವರು ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಹಿಂದಿನ ಪಾತ್ರಗಳಿಗಿಂತ ಭಿನ್ನವಾಗಿದೆ.
ಕಬೀರ್ ದುಹಾನ್ ಸಿಂಗ್, ‘ಕಟ್ಟಾಳನ್’ ಚಿತ್ರಕ್ಕಾಗಿ ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್ ಜೊತೆ ಮತ್ತೆ ಕೈಜೋಡಿಸಿದ್ದಾರೆ. ‘ಕಾಂತಾರ’ ಚಿತ್ರದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಬಿ. ಅಜನೀಶ್ ಲೋಕನಾಥ್ ಅವರ ಧ್ವನಿ,
ಷಮೀರ್ ಮುಹಮ್ಮದ್ ಅವರ ಛಾಯಾಗ್ರಹಣ ಮತ್ತು ಕೆಚಾ ಖಾಂಫಕ್‌ಡೀ ಹಾಗೂ ಕಲೈ ಕಿಂಗ್ಸನ್ ಅವರ ಸಾಹಸ ಸಂಯೋಜನೆಯೊಂದಿಗೆ ‘ಕಟ್ಟಾಳನ್’ ಚಿತ್ರ ಮೂಡಿಬರಲಿದೆ.
ಕ್ಯೂಬ್ಸ್ ಇಂಟರ್ನ್ಯಾಷನಲ್ನ ‘ಕಟ್ಟಾಳನ್’ ಚಿತ್ರ ಮಲಯಾಳಂ, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಮೂಲಕ ಚಿತ್ರವು ಭಾರತದಾದ್ಯಂತ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲಿದೆ ಎಂದು ಚಿತ್ರತಂಡ ಹೇಳಿದೆ.