ಮಂಗಳೂರು, ಡಿ.17: ಕೊಂಕಣಿ ಸಾಹಿತಿ, ಲೇಖಕ ಜೆ.ಎಫ್. ಡಿಸೋಜಾರ 18ನೆ ಕಥೆ ಪುಸ್ತಕ ‘ಭಾಂಗಾರಾಚೊ ಕೊಳ್ಸೊ’ ಕೃತಿಯನ್ನು ಸಾಹಿತಿ ರೊನಾಲ್ಡ್ ರೋಚ್ ಕಾಸ್ಸಿಯಾ ಅವರು ಬುಧವಾರ ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿದರು.
ಜೆ.ಎಫ್. ಡಿಸೋಜಾ ಅವರು ಭಂಗರಾಚಿ ಮಸ್ಲಿ (ಚಿನ್ನದ ಮೀನು), ಭಂಗರಾಚಿ ಕುರಾದ್ (ಚಿನ್ನದ ಕೊಡಲಿ), ಭಂಗಾರಾಚೆ ಚಿತಾಲ್ (ಚಿನ್ನದ ಜಿಂಕೆ), ಭಂಗಾರಾಚೆ ಮೋರ್ (ಚಿನ್ನದ ನವಿಲು), ಭಂಗಾರಾಚೊ ಕೀರ್ (ಚಿನ್ನದ ಗಿಳಿ), ಭಾಂಗಾರಾಚೊ ಬುಡ್ಕುಲೊ (ಚಿನ್ನದ ಮಡಕೆ) ಹಾಗೂ ಇತ್ತೀಚೆಗೆ ಬಿಡುಗಡೆಯಾದ ಭಂಗರಸೋ ಕೊಲ್ಸೋ (ಚಿನ್ನದ ಕೊಡ) ಸೇರಿ18 ಮಕ್ಕಳ ಕಥೆಗಳ ಪುಸ್ತಕಗಳನ್ನು ರಚಿಸಿದ್ದಾರೆ.. ಅವರು ಮಕ್ಕಳ ಕಥೆಗಳು, ಇತರ ಕಥೆ, ಚುಟುಕುಗಳ ಮೂಲಕ ಹಲವು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. ಎಂದು ಸಾಹಿತಿ ಡಾಲ್ಪಿ ಲೋಬೋ ಅವರು ಕೃತಿಕಾರರ ಬಗ್ಗೆ ಪರಿಚಯ ನೀಡಿದರು.
ಈ ಸಂದರ್ಭದಲ್ಲಿ ಮಾರ್ಸೆಲ್ ಡಿಸೋಜಾ, ಜಾನೆಟ್ ಡಿಸೋಜಾ, ಡ್ಯಾಫ್ನಿ ಮಿನೇಜಸ್ ಉಪಸ್ಥಿತರಿದ್ದರು.











