ಮಂಗಳೂರು, ಏ. 09 : ಡಿಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಡೋಲ್ಫಿ ಡಿ ಸೋಜ ನಿರ್ಮಾಣದಲ್ಲಿ ತಯಾರಾದ ತುಳು ಚಿತ್ರ ಎಪ್ರಿಲ್ 10 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕರಾದ ಡೋಲ್ಫಿ ಡಿ ಸೋಜ ಅವರು ತಿಳಿಸಿದರು.
ಚಿತ್ರದ ನಟ ವಿನೀತ್ ಕುಮಾರ್ ಅವರು ಮಾತಾಡಿ ,ಸಿನಿಮಾವು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. 90 ಎಮ್ ಎಲ್ ಸಿನಿಮಾದಲ್ಲಿ ವಿನೀತ್ ಕುಮಾರ್, ರುಹಾನಿ ಶೆಟ್ಟಿ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್, ಪುಷ್ಪರಾಜ್ ಬೊಳ್ಳೂರು, ನಮಿತ, ಶೈಲಾಶ್ರೀ, ಧೃತಿ ನಟಿಸಿದ್ದಾರೆ ಎಂದರು.
90 ಎಂಎಲ್ ತುಳು ಚಿತ್ರ ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಸುಳ್ಯ ದೇರಳಕಟ್ಟೆ, ಸುರತ್ಕಲ್, ಪಡುಬಿದ್ರಿ ಮೊದಲಾದೆಡೆ ಬಿಡುಗಡೆಗೊಳ್ಳಲಿದೆ. ಸಂಭಾಷಣೆ ತುಳಸಿದಾಸ್ ಮಂಜೇಶ್ವರ್, ಛಾಯಾಗ್ರಾಹಣ ಅರ್ಜುನ್ ಎಂವಿ, ಸಂಕಲನ ಸಚಿನ್ ರಾಮ್, ಡಿಸೈನ್ ಆಚಾರ್ಯ, ಸಂಗೀತ ಸೃಜನ್ ಕುಮಾರ್ ತೋನ್ಸ್, ರಂಜಿತ್ ಸಿ ಬಜಾಲ್ ಕಥೆ. ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಡೋಲ್ಫಿ ಡಿ ಸೋಜ, ಸಚಿನ್, ಉಮೇಶ್ ಮಿಜಾರ್,ರುಹಾನಿ ಶೆಟ್ಟಿ,ಶೈಲಾಶ್ರೀ,ಧೃತಿ ಮತ್ತಿತರರು ಉಪಸ್ಥಿತರಿದ್ದರು.











