ಚೆನ್ನೈ, ಮೇ. 11 : ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ವಿಜಯ್ ಅವರು ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.
ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣ ವಚನ ಬೋಧಿಸಿದರು.
234 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ 120 ಶಾಸಕರ ಬೆಂಬಲ ಪಡೆದ ವಿಜಯ್ ಜೊತೆಗೆ, ರಾಜ್ಯಪಾಲ ಅರ್ಲೇಕರ್ ಅವರು ‘ಬಸ್ಸಿ’ ಎನ್ ಆನಂದ್, ಕೆಜಿ ಅರುಣ್‌ರಾಜ್, ಆಧವ್ ಅರ್ಜುನ, ಎ ರಾಜ್‌ಮೋಹನ್, ಕೆಎ ಸೆಂಗೋಟ್ಟೈಯನ್, ಪಿ ವೆಂಕಟರಮಣನ್, ಸಿಟಿಆರ್ ನಿರ್ಮಲ್ ಕುಮಾರ್, ಕೀರ್ತನಾ ಮತ್ತು ಕೆಟಿ ಪ್ರಭು ಅವರನ್ನೊಳಗೊಂಡ ಹೊಸ ಸಚಿವ ಸಂಪುಟಕ್ಕೆ ಪ್ರಮಾಣ ವಚನ ಬೋಧಿಸಿದರು.











