ಮಂಗಳೂರು, ಸೆ. 21 : ನಗರದ ಟಿಎಂಎ ಪೈ ಇಂಟರ್ ನ್ಯಾಶನಲ್ ಕನ್ವೆಶನ್ ಸೆಂಟರ್‌ನಲ್ಲಿ ಭಾನುವಾರ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತಾಡಿದ ಅವರು, ಮುಂಬಯಿ ದೇವಾಡಿಗರ ಸಂಘದವರು ನೀಡಿದ ವಿದ್ಯಾರ್ಥಿ ವೇತನದಿಂದಲೇ ನಾನು ಕಲಿತೆ. ಕಡುಬಡತನದಿಂದ ಬಂದ ನಾನು ಚೆನ್ನಾಗಿ ಕಲಿತು, ಮೂರು ಮಹಾಕಾವ್ಯ ಬರೆದಿದ್ದೇನೆ. ಮುಖ್ಯಮಂತ್ರಿಯಾಗಿ ಹಲವು ಜನಪರ ಯೋಜನೆ ಜಾರಿಗೆ ತಂದಿದ್ದೇನೆ. ಇದಕ್ಕೆ ಸಮುದಾಯದ ಪ್ರೋತ್ಸಾಹವೂ ಕಾರಣವಾಗಿದೆ. ರಾಜ್ಯ ದೇವಾಡಿಗರ ಸಂಘ ಇಂದಿಗೆ ತುಂಬಾ ಬೆಳೆದಿದೆ. ಯಾವುದೇ ಸಂಸ್ಥೆಯು ಶತಮಾನೋತ್ಸವ ಆಚರಿಸುವುದು ಸುಲಭದ ವಿಷಯವಲ್ಲ.ಅದರ ಹಿಂದೆ ಹಿರಿಯ ಸಮಾಜಬಾಂಧವರ ಬಹಳಷ್ಟು ಕೊಡುಗೆಗಳು ಇದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಘಟಕದ ಅಧ್ಯಕ್ಷ ಅಶೋಕ್ ಮೊಯ್ಲಿ ಅವರು ಮಾತನಾಡಿ, ಸಂಘವು ಸಮುದಾಯ ಜನಪರ-ಪ್ರಗತಿಪರ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಸಮಾಜ ಬಾಂಧವರಲ್ಲಿ ಜಾತಿ ಪ್ರಜ್ಞೆ ಧಾರ್ಮಿಕ ಪ್ರಜ್ಞೆ ಸಾಮಾಜಿಕ ಪ್ರಜ್ಞೆ ಮೂಡಿಸಿದೆ ಎಂದರು.
ಡಾ|ಕೆ. ವಿ. ದೇವಾಡಿಗ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನ್ಯೂರೋ ಸರ್ಜನ್ ಡಾ|| ಕೆ.ವಿ. ದೇವಾಡಿಗ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೈಲಿ ಅವರನ್ನು ಗೌರವಿಸಲಾಯಿತು.ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ವಾನ್ ಅಣ್ಣುದೇವಾಡಿಗ ಧರ್ಮಸ್ಥಳ, ಗೋಪಾಲ್ ಶೇರಿಗಾರ್ ಹಾಗೂ ಲಲಿತಾ ದಂಪತಿ, ಡಾ| ಪ್ರವೀಣ್ ಕುಮಾರ್ ಹೊಸಬೆಟ್ಟು, ಜಯಾನಂದ ದೇವಾಡಿಗ ಅವರ ಪರವಾಗಿ ಸರೋಜಿನಿ, ದಿ| ವಾಮನ್ ಮರೋಳಿ ಅವರ ಮರಣೋತ್ತರ ಗೌರವ ಹಾಗೂ ವೇಣಿ, ಭಾಸ್ಕರ್ ಕೆ., ವಿಜಯಲಕ್ಷ್ಮೀ ಶಿಬರೂರು, ಡಾ| ವಿಶ್ವನಾಥ ಶೇರಿಗಾರ್, ಪ್ರವೀಣ್ ದೇವಾಡಿಗ ಅವರನ್ನು ಸಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಎಚ್., ಶತಮಾನೋತ್ಸವ ಆಚರಣೆ ಗೌರವಾಧ್ಯಕ್ಷರಾದ ಹರೀಶ್ ಶೇರಿಗಾರ್, ವಿಷನ್ ಮಂಗಳ ಯೋಜನೆ ಗೌರವಾಧ್ಯಕ್ಷರು ಡಾ.ದೇವರಾಜ್ ಕೆ., ಪ್ರಮುಖರಾದ ಧರ್ಮಪಾಲ ಯು. ದೇವಾಡಿಗ, ಡಾ| ಬಿ.ಎಸ್. ಶೇರಿಗಾರ್, ಮೋಹನ್ ದಾಸ್, ರವಿ ಸುಬ್ಬಯ್ಯ ದೇವಾಡಿಗ, ಕೆ.ಜೆ. ದೇವಾಡಿಗ, ನಾರಾಯಣ ದೇವಾಡಿಗ, ದಿನೇಶ್ ದೇವಾಡಿಗ, ಬಾಬು ದೇವಾಡಿಗ, ಭಾಸ್ಕರ್ ಶೇರಿಗಾರ್, ಆಲೂರು ರಘು ರಾಮ್ ದೇವಾಡಿಗ, ನಾಗರಾಜ್ ದೇವಾ ಡಿಗ, ಸುರೇಶ್ ಚಂದಪ್ಪ ದೇವಾ ಡಿಗ, ಶೇಖರ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ವೀಣಾ ಗಣೇಶ್ ಸ್ವಾಗತಿಸಿದರು. ಖಜಾಂಚಿ ಗೀತಾ ವಿ. ಕಲ್ಯಾಣಪುರ ವಂದಿಸಿದರು.











