ಮಂಗಳೂರು,ಜೂ. 19 : ಕರ್ನಾಟಕ ನಾಯರ್ ಸೊಸೈಟಿ ಮಂಗಳೂರು ಘಟಕದ ಸಾಮಾನ್ಯ ಸಭೆಯು ಮಂಗಳೂರಿನ ಕೆ.ಪಿ.ಟಿ ಬಳಿಯಿರುವ ಎಸ್. ಕ್ಯೂಬ್ ಸೆಂಟರ್ ಸಭಾಂಗಣದಲ್ಲಿ ಜರುಗಿತು, ಸಾಮಾನ್ಯ ಸಭೆಯ ನಂತರ ಜರುಗಿದ ಮುಂದಿನ 2026-28 ನೇ ಅವಧಿಗೆ ಅಧ್ಯಕ್ಷರಾಗಿ ಮುರಳಿ ಹೊಸಮಜಲು, ಕಾರ್ಯದರ್ಶಿಯಾಗಿ ವಿ.ಎಮ್.ಸತೀಶನ್ ಪುನರಾಯ್ಕೆಗೊಂಡರು.
ಖಜಾಂಚಿಯಾಗಿ ಅಜಯಕುಮಾರ್ , ಉಪಾಧ್ಯಕ್ಷರಾಗಿ ವಾಸಂತಿ ನಾಯರ್, ಜತೆ ಕಾರ್ಯದರ್ಶಿಯಾಗಿ ಮಂಜು ಅಜಿತ್, ಜತೆ ಖಜಾಂಚಿಯಾಗಿ ರವೀಂದ್ರನಾಥ್, ಬೋರ್ಡ್ ಮೆಂಬರುಗಳಾಗಿ ವಿಜಯಕುಮಾರ್, ಎಮ್.ವಿ. ರಾಜನ್, ಎ.ಎಸ್.ಮೋಹನ್ ರವರು, ಸಮಿತಿಯ ಸದಸ್ಯರಾಗಿ ಜೋತಿಷ್ ಕುಮಾರ್, ಜಯಲಕ್ಷ್ಮೀ ಚಂದ್ರಮೋಹನ್ , ಮಣಿಕಂಠನ್, ವಿನೋದ್‌ವಿನೋದ್‌ರಾಜ್, ಹರೀಶ್ ಗೋವಿಂದ್, ದೇವರಾಜ್ , ವಿನಯನ್ ನಾಯರ್ ಆಯ್ಕೆಗೊಂಡರು.
ಮಹಿಳಾ ವಿಭಾಗದ ಅಧ್ಯಕ್ಷರಾಗಿ ಸುಜಾತಾ ನಾಯರ್, ಕಾರ್ಯದರ್ಶಿಯಾಗಿ ಶ್ರೀಜಾ ನಂಬಿಯಾರ್, ಹಾಗೂ ಖಜಾಂಚಿಯಾಗಿ ಗೋಪಿಕಾ ರಾಣಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರಭಾ ವಿಜಯಕುಮಾರ್, ಜತೆಕಾರ್ಯದರ್ಶಿಯಾಗಿ ಅನಿತಾ ಜಯಚಂದ್ರನ್ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಉಡುಪಿ ಘಟಕ ಸಜಿ ಪಿಳ್ಳೈ ಹಾಗೂ ವೀಕ್ಷಕರಾಗಿ ಮೋಹನ್ ದಾಸ್, ಉಡುಪಿ ಅವರು ಭಾಗವಹಿಸಿದ್ದರು.











