ಕಡಬ, ಆ.01 : ಮಳೆ ಮತ್ತು ಗಾಳಿಗೆ ಅಡಿಕೆಮರ ಮುರಿದು ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳದಲ್ಲಿ ನಡೆದಿದೆ.
ಮೃತರನ್ನು ಯಾದವ ಗೌಡ (66) ಎಂದು ಗುರುತಿಸಲಾಗಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೀಸಿದ ಮಳೆ ಮತ್ತು ಗಾಳಿಗೆ ಅಡಿಕೆಮರ ಮುರಿದು ಬಿದ್ದು ಯಾದವ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











