ಚೆನ್ನೈ: ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ಹೊಂದಿರುವ ನಟಿ ನಯನತಾರಾ ಸಿನಿಮಾಗಳಲ್ಲಿ ಬಂಡವಾಳ ಹೂಡುತ್ತಲೇ ಬೇರೆ ವ್ಯವಹಾರಗಳಲ್ಲೂ ಹಣ ತೊಡಗಿಸುತ್ತಿದ್ದಾರೆ. ಈಗಾಗಲೇ ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಇತ್ತೀಚಿನ ವರದಿಗಳ ಪ್ರಕಾರ ಅವರು ಯುಎಇಯಲ್ಲಿ ತಮ್ಮ ಹೊಸ ಉದ್ಯಮಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.
ನಯನತಾರಾ ಮತ್ತು ವಿಘ್ನೇಶ್ ಅವರು ತೈಲ ಕಂಪನಿಯಲ್ಲಿ ಜಂಟಿಯಾಗಿ 100 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಕಳೆದ ತಿಂಗಳು ನಯನತಾರ ತನ್ನ ಭಾವಿ ಪತಿ ವಿಘ್ನೇಶ್ ಜೊತೆ ದುಬೈಗೆ ಪ್ರವಾಸಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಆದರೆ, ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ನಟಿಯಾಗಿರುವುದರ ಜೊತೆಗೆ, ಅವರು ತಮ್ಮ ಭಾವಿ ಪತಿರ ವಿಘ್ನೇಶ್ ಶಿವನ್ ಅವರೊಂದಿಗೆ ರೌಡಿ ಪಿಕ್ಚರ್ಸ್ (ಪ್ರೊಡಕ್ಷನ್ ಹೌಸ್) ಅನ್ನು ಪ್ರಾರಂಭಿಸಿದರು. ಇತ್ತಿಚೇಗೆ ನಯನತಾರಾ ಚೆನ್ನೈನ ಐಷಾರಾಮಿ ಪ್ರದೇಶದಲ್ಲಿ 4BKH ಫ್ಲಾಟ್ ಅನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.