ಮೂಡುಬಿದಿರೆ : ಇಲ್ಲಿನ ಗಂಟಾಲ್ಕಟ್ಟೆಯ ಸಮೀಪ ಜ.20 ರ ಮುಂಜಾನೆ.ಗಂಟಾಲ್ಕಟ್ಟೆಯ ಸಮೀಪ ಓಮ್ನಿ ಕಾರು ಬೈಕ್ ಢಿಕ್ಕಿಯಾಗಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದ ವಾಮನ ಕುಮಾರ್ ವೇಣೂರು (47) ಮೃತಪಟ್ಟಿದ್ದಾರೆ
ಧರ್ಮಸ್ಥಳ ಮೇಳದ , ಕದ್ರಿ ಮೇಳ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಹಿರಿಯಡ್ಕ ಮೇಳದಲ್ಲಿ ಕಲಾವಿದರಾಗಿದ್ದರು. ಕುಂದಾಪುರದ ಕೊಂಕಿ ಎಂಬಲ್ಲಿ ರಾತ್ರಿ ಯಕ್ಷಗಾನವನ್ನು ಮುಗಿಸಿ ಮನೆಗೆ ಹಿಂತಿರುಗುವಾಗ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ.
26 ವರ್ಷಗಳ ತಿರುಗಾಟ ನಡೆಸಿದ ಅನುಭವಿ ಕಲಾವಿದರಾಗಿದ್ದ ಹಿರಿಯ ಯಕ್ಷಗಾನ ಕಲಾವಿದ ವಾಮನ ಕುಮಾರ್ ಅವರು ಹಾಸ್ಯ, ಸ್ತ್ರೀ, ಪುರುಷ, ಪುಂಡು ಹೀಗೆ ಹಲವು ಪಾತ್ರಗಳನ್ನು ಮಾಡಿ ಅಭಿಮಾನಿಗಳ ಮನಗೆದ್ದಿದ್ದರು. ವಾಮನ್ ಕುಮಾರ್ ಅವರ ಸಾವಿಗೆ ಯಕ್ಷಗಾನ ಕಲಾವಿದರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.