ಮುಂಬೈ: ಬಾಲಿವುಡ್ ನಟಿ, ಐಟಂ ಗರ್ಲ್ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಸ್ವಯಂವರದ ಮೂಲಕ ರಿತೇಶ್ ಎಂಬಾತನನ್ನು ವರಿಸಿದ್ದ ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ನಂತರ ಅವರಿಂದ ದೂರವಗಿದ್ದರು.ಆನಂತರ ತಮಗೆ ಇನ್ನೊಬ್ಬರೊಂದಿಗೆ ಮದುವೆಯಾವಾಗಿರುವುದಾಗಿ ಹೇಳಿಕೊಂಡು, ಆತನನ್ನು ಎಲ್ಲರಿಗೂ ಪರಿಚಯಿಸಿದ್ದರು.ಆದರೆ ನಂತರ ಇದು ಸುಳ್ಳು ಎಂದು ತಿಳಿಯಿತು.
ಇದೀಗ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ತಮಗೆ ಹೊಸ ಪ್ರೇಮಿ ಸಿಕ್ಕಿರುವುದಾಗಿ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಅವರ ಹೊಸ ಪ್ರೇಮಿ ಮೈಸೂರಿನ ಆದಿಲ್ ಎಂಬವರು ಆಗಿರುತ್ತಾರೆ.ಮೈಸೂರಿನ ಆದಿಲ್ ಎಂಬವರು ತನಗೆ ಬಿಎಂಡಬ್ಲ್ಯೂ ಕಾರ್ ನೀಡಿ ಪ್ರಪೋಸ್ ಮಾಡಿದ್ದಾರೆ ಎಂದು ರಾಖಿ ಸಾವಂತ್ ತಿಳಿಸಿದ್ದಾರೆ.