ಸುರತ್ಕಲ್ : ಇಲ್ಲಿನ ಮಂಗಳಪೇಟೆ ನಿವಾಸಿ ಫಾಝಿಲ್(23) ಎಂಬ ಯುವಕನ ಕೊಲೆ ಜುಲೈ 28ರ ಗುರುವಾರ ರಾತ್ರಿ ವೇಳೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಮಂಗಳೂರು ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿದ್ದಾರೆ.
ಸುರತ್ಕಲ್ ಜಂಕ್ಷನ್ನ ಎಸ್.ಕೆ ಮೊಬೈಲ್ ಅಂಗಡಿ ಮುಂಭಾಗದಲ್ಲಿ ಮೂವರು ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ ಎಂದು ಅವರು ಹೇಳಿದ್ದಾರೆ.
ಸುರತ್ಕಲ್ನಲ್ಲಿ ನಡೆದಿರುವ ಫಾಝಿಲ್ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಸು ರತ್ಕಲ್, ಬಜಪೆ, ಮುಲ್ಕಿ ಮತ್ತು ಪಣಂಬೂರು ಠಾಣಾ ವ್ಯಾಪ್ತಿಗಳಲ್ಲಿ ಶನಿವಾರದವರೆಗೆ ಸೆಕ್ಷನ್ 144 ಜಾರಿಗೊಳಿಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ