ಉಡುಪಿ : ನಿಯಂತ್ರಣ ತಪ್ಪಿ ಬೈಕ್ ಚರಂಡಿಗೆ ಬಿದ್ದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಅಂಬಲ್ಪಾಡಿಯ ಎನ್ಎಚ್ 66 ಸರ್ವಿಸ್ ರಸ್ತೆಯಲ್ಲಿ ಸಂಭವಿಸಿದೆ.
ಮೃತರನ್ನು ಕೊಡವೂರಿನ ಲಿಯಾನ್ ವಿಲ್ಸನ್ ಅಮ್ಮನ್ನ (19) ಎಂದು ಗುರುತಿಸಲಾಗಿದೆ. ಲಿಯಾನ್ ಅವರು ಎನ್ಎಚ್ 66 ಸರ್ವಿಸ್ ರಸ್ತೆಯಲ್ಲಿ ಅಂಬಲ್ಪಾಡಿ ಕಡೆಯಿಂದ ಕಿನ್ನಿಮುಲ್ಕಿ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು,ಗಾಯಗೊಂಡ ಅವರನ್ನು ಅಂಬಲಪಾಡಿಯ ಆಸ್ಪತ್ರೆಗೆ ಕರೆದೊಯ್ದು ನಂತರ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.