ಮಂಗಳೂರು, ಫೆ. 22 : ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯತ್ಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಮತದಾನದ ದಿನದಂದು ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುದು-1ರಿಂದ 10 ಕ್ಷೇತ್ರಗಳು, ಬಂಟ್ವಾಳ ತಾಲೂಕಿನ 43-ಅನಂತಾಡಿಯ ಗ್ರಾಮ ಪಂಚಾಯತ್ನ 2-ಅನಂತಾಡಿ, ಕಡಬ ತಾಲೂಕಿನ ಕಟ್ರುಪಾಡಿ ಗ್ರಾಮ ಪಂಚಾಯತ್ನ 1-ಬಲ್ಯ ಹಾಗೂ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ 4-ಆರ್ಯಾಪುವಿನಲ್ಲಿ ಫೆ. 24 ಹಾಗೂ ಫೆ. 25ರವರೆಗೆ ಚುನಾವಣೆ ನಡೆಯಲಿದೆ.
ಅದ್ದರಿಂದ ಫೆ.24ರ ಬೆಳಿಗ್ಗೆ 6 ಗಂಟೆಯಿಂದ ಫೆ.25ರ ಸಂಜೆ ಚುನಾವಣೆ ಮುಕ್ತಾಯಗೊಳ್ಳುವವರೆಗೆ ಈ ಭಾಗಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಆದೇಶಿಸಿದ್ದಾರೆ.
3 Comments
When we suspect that our wife or husband has betrayed the marriage, but there is no direct evidence, or we want to worry about the safety of our children, monitoring their mobile phones is also a good solution, usually allowing you to obtain more important information.
Locate through the “Find My Mobile” system software that comes with the phone, or through third – Party mobile phone number locating software.
Pingback: เครื่องสแกนบัตร