ಮಂಗಳೂರು, ನ.27 : ಕರ್ನಾಟಕದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಉತ್ತಮ ಕ್ರೀಡಾ ವೇದಿಕೆ ಕಲ್ಪಿಸುವ ಉದ್ದೇಶದಿಂದ ಅಸ್ಮಿತಾ 25ನೇ ಸಬ್ ಜೂನಿಯರ್ ರಾಜ್ಯ ಮಹಿಳಾ ವುಶು ಚಾಂಪಿಯನ್ಶಿಪ್ ಕ್ರೀಡಾಕೂಟವನ್ನು ನ.27, 28 ಮತ್ತು 29ರಂದು ನಗರದ ಸಂತ ಅಲೋಶಿಯಸ್ ಪರಿಗಣಿತ ವಿವಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ವುಶು ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಅಶೋಕ್ ಡಿ ಮೊಕಾಶಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ವುಶು ಸಂಘವು ಕರ್ನಾಟಕ ವುಶು ಸಂಘದ ಸಹಯೋಗದೊಂದಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಜಿಲ್ಲೆಯಿಂದ 200ಕ್ಕೂ ಹೆಚ್ಚು ಮಹಿಳಾ ವುಶು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿ ಸಲು ಅವಕಾಶ ದೊರೆಯಲಿದೆ ಎಂದರು.
ನ. 27ರಂದು ಬೆಳಗ್ಗೆ 8ರಿಂದ ಕ್ರೀಡಾಪಟುಗಳ ಆಗಮನ,ತೂಕ ಪರಿಶೀಲನೆ ಹಾಗೂ ತರಬೇತಿದಾರರು ಮತ್ತು ನಿರ್ಣಾಯಕರ ಸಭೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ 25ನೇ ಕರ್ನಾಟಕ ರಾಜ್ಯ ವುಶು ಚಾಂಪಿಯನ್ಶಿಪ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾನಾ ಗಣ್ಯರು ಭಾಗವಹಿಸಲಿದ್ದಾರೆ. 11 ಗಂಟೆಗೆ ಸ್ಪರ್ಧೆಗಳು ಆರಂಭವಾಗಲಿವೆ. ನ. 28ರಂದು ಸಂಜೆ 4 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.
ನ. 28ರಂದು ಸಂಜೆ 6ರಿಂದ ಅಸ್ತಿತಾ ಮಹಿಳಾ ವುಶು ಲೀಗ್ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಆಗಮನ, ತೂಕ ಪರಿಶೀಲನೆ ಹಾಗೂ ತರಬೇತಿದಾರರು ಮತ್ತು ನಿರ್ಣಾಯಕರ ಸಭೆ ನಡೆಯಲಿದೆ. ನ. 29ರಂದು ಬೆಳಗ್ಗೆ 10 ಗಂಟೆಗೆ ಲೀಗ್ ಉದ್ಘಾಟನೆ ನಡೆಯಲಿದ್ದು, ಬಳಿಕ ಸ್ಪರ್ಧೆಗಳು ಆರಂಭವಾಗಲಿವೆ. ಸಂಜೆ 6 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವುಶು ಅಸೋಸಿಯೇಶನ್ನ ಕೋಶಾಧಿಕಾರಿ ಸಂಗಮೇಶ್ ಆರ್.ಎಲ್, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ರೋಹನ್ ಎನ್, ಕೋಚಿಗಳಾದ ರಮೇಶ್, ಸಾನಿಯಾ ಉಪಸ್ಥಿತರಿದ್ದರು.











