ಉಳ್ಳಾಲ, ಜು. 03 : ಆಂಬ್ಯುಲೆನ್ಸ್ ವಾಹನ ಢಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ತಲಪಾಡಿ ಮರೋಳಿ ಬಾರ್ ಎದುರುಗಡೆ ಸಂಭವಿಸಿದೆ.
ಮೃತರನ್ನು ಕಾಸರಗೋಡು ಮಂಗಲ್ಪಾಡಿ ಹೇರೂರು ನಿವಾಸಿ ಫ್ರಾನ್ಸಿಸ್ ಡಿಸೋಜ (62) ಎಂದು ಗುರುತಿಸಲಾಗಿದೆ.
ಮನೆಯಿಂದ ತಲಪಾಡಿಗೆ ಬಂದಿದ್ದ ಫ್ರಾನ್ಸಿಸ್, ಮರೋಳಿ ಬಾರ್ ಎದುರುಗಡೆಯಿಂದ ವಾಪಸ್ಸು ಮನೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭ ಕೇರಳದಿಂದ ಮಂಗಳೂರು ಕಡೆಗೆ ವೇಗದಲ್ಲಿ ಬರುತ್ತಿದ್ದ ಖಾಲಿ ಆಂಬ್ಯುಲೆನ್ಸ್ ಫ್ರಾನ್ಸಿಸ್ ಅವರಿಗೆ ಢಿಕ್ಕಿ ಹೊಡೆದ ದ ಪರಿಣಾಮ ಫ್ರಾನ್ಸಿಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.