ರೋಡ್ಸ್, ಜು. 27 : ಕಾಡ್ಗಿಚ್ಚು ನಂದಿಸಲು ಬಂದಿದ್ದ ಅಗ್ನಿಶಾಮಕ ವಿಮಾನವು ಮರಕ್ಕೆ ಡಿಕ್ಕಿ ಹೊಡದು ಪತನಗೊಂಡು ಇಬ್ಬರು ಪೈಲಟ್ಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗ್ರೀಸ್ನಲ್ಲಿ ನಡೆದಿದೆ.
ಎವಿಯಾ ದ್ವೀಪದಲ್ಲಿರುವ ಕಾಡಿನಲ್ಲಿ ಕಾಡ್ಗಿಚ್ಚಿನಿಂದಾಗಿ ಬೆಂಕಿ ಧಗಧಗಿಸುತ್ತಿತ್ತು, ಬೆಂಕಿಯನ್ನು ನಂದಿಸಲು ಗ್ರೀಕ್ ವಾಟರ್ ಬಾಂಬ್ ವಿಮಾನವು ಬಂದಿತ್ತು, ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಇಬ್ಬರು ಪೈಲಟ್ಗಳು ಸುಟ್ಟು ಕರಕಲಾಗಿದ್ದಾರೆ ಎಂದು ವರದಿಯಾಗಿದೆ.