ಸೇಲಂ, ಅ. 27 : ಸಂಕೀರ್ಣ ವಿಜ್ಞಾನ ವಿಷಯಗಳ ಕುರಿತು ಜನಸಾಮಾನ್ಯರು ಮತ್ತು ದಿಗ್ಗಜರೊಂದಿಗೆ ಸರಳ ಹಾಗೂ ಸಲೀಸಾಗಿ ಮಾತನಾಡುತ್ತಿದ್ದ ಖ್ಯಾತ ಜನತಾ ವಿಜ್ಞಾನಿ ಡಾ.ವಿ.ಎಸ್.ವೆಂಕಟವರಧನ್(85) ತಮಿಳುನಾಡಿನ ಸೇಲಂನಲ್ಲಿ ನಿಧನರಾಗಿದ್ದಾರೆ.
ಜಿಯೋಫಿಸಿಕ್ಸ್, ಬಾಹ್ಯಾಕಾಶ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ಐವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿರುವ ಅವರು ಪ್ರಮುಖ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ವಿಜ್ಞಾನದ ವಿವಿಧ ಅಂಶಗಳ ಕುರಿತು ಸಾವಿರಕ್ಕೂ ಹೆಚ್ಚು ಜನಪ್ರಿಯ ಲೇಖನಗಳನ್ನು ಬರೆದಿದ್ದರು.
ಮೃತರು ಪತ್ನಿ ಶಕುಂತಲಾ, ಪುತ್ರಿ ಅರುಣಾ ಹಾಗೂ ಪುತ್ರ ಸುಂದರ್ ಅವರನ್ನು ಅಗಲಿದ್ದಾರೆ.