ಮಂಗಳೂರು, ಮಾ.16: ರಾಜ್ಯ ಸರಕಾರವು ತುಳು, ಕೊಂಕಣಿ, ಬ್ಯಾರಿ ಅಕಾಡೆಮಿಗಳಿಗೆ ಅಧ್ಯಕ್ಷ ರು ಮತ್ತು ಸದಸ್ಯರನ್ನು ನೇಮಕಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ತಾರನಾಥ್ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಉಮರ್ ಯು.ಎಚ್. ಅವರನ್ನು ನೇಮಿಸಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಬೆಂಗಳೂರಿಗೆ ಫಾದರ್ ಪ್ರಕಾಶ್ ಮಾಡ್ತಾ ಎಸ್ ಜೆ. ದಕ್ಷಿಣ ಕನ್ನಡಕ್ಕೆ ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೋ, ಡಾ ವಿಜಯಲಕ್ಷ್ಮಿ ನಾಯಕ್, ಸಪ್ನಾ ಮೇ ಕ್ರಾಸ್ತಾ ಮತ್ತು ಸಮರ್ಥ ಭಟ್ ಸದಸ್ಯರಾಗಿದ್ದಾರೆ. ಕಾರ್ಕಳಕ್ಕೆ ದಯಾನಂದ ಮುಡ್ಯೇಕರ್, ಚಿಕ್ಕಮಗಳೂರಿಗೆ ಪ್ರಮೋದ್ ಪಿಂಟೋ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಯಲ್ಲಾಪುರಕ್ಕೆ ಸುನೀಲ್ ಸಿದ್ದಿ, ಉತ್ತರ ಕನ್ನಡಕ್ಕೆ ಜೇಮ್ಸ್ ಲೋಪೆಜ್ ಸದಸ್ಯರಾಗಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಪೃಥ್ವಿರಾಜ್, ಕುಂಬ್ರ ದುರ್ಗಾಪ್ರಸಾದ್ ರೈ, ಅಕ್ಷಯ್ ಆರ್ ಶೆಟ್ಟಿ, ಮೋಹನ್ ದಾಸ್ ಕೊಟ್ಟಾರಿ, ಶೈಲೇಶ್ ಬಿನ್ ಬೋಜ ಸುವರ್ಣ, ಬೂಬ ಪೂಜಾರಿ, ಕಿಶೋರ್ ಬಿನ್ ಗುಡ್ಡಪ್ಪ ಗೌಡ, ರೋಹಿತಾಶ್ವ ಯು ಕಾಪಿಕಾಡ್ ಮತ್ತು ನಾಗೇಶ್ ಕುಮಾರ್ ಉದ್ಯಾವರ ಸದಸ್ಯರಾಗಿದ್ದಾರೆ. ಉಡುಪಿಗೆ ಸಂತೋಷ್ ಶೆಟ್ಟಿ ಸದಸ್ಯರಾಗಿದ್ದಾರೆ.
ಉಮ್ಮರ್ ಯು ಹೆಚ್ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ನಾಮ ನಿರ್ದೇಶನಗೊಂಡಿದ್ದಾರೆ.