ಮಂಗಳೂರು, ಅ. 15: ಎ.ಯು. ಕ್ರಿಯೇಶನ್ಸ್ ಮುಖ್ಯಸ್ಥ ಅಚಲ್ ಉಬರಡ್ಕ ಅವರ ಕಿರುಚಿತ್ರ ‘ಸೇವ್ ಅವರ್ ಸೋಲ್’ ಅ. 18ರಂದು ಯೂಟ್ಯೂಬ್ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿ ನಿರ್ಮಾಪಕ ಯು.ಜಿ. ರಾಘವ್ ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಸ್ಥ ಅಚಲ್ ಅವರು.ಅಪಘಾತ ಮತ್ತು ಅತ್ಯಾಚಾರದಂತಹ ಘಟನೆಗಳು ನಡೆದಾಗ ಮೊಬೈಲ್ ನೆಟ್ವರ್ಕ್ ಇಲ್ಲದಿದ್ದರೂ ಮೊಬೈಲ್ ಫೋನ್ನಲ್ಲಿರುವ ಫೀಚರ್ ಬಳಸಿ ನಾವು ನಮ್ಮ ಆತ್ಮೀಯರನ್ನು ಅಥವಾ ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಸಂದೇಶವಿರುವ ಕಿರುಚಿತ್ರ ಎಂದು ಅವರು ಹೇಳಿದರು.ನಿರ್ಮಾಪಕ ಯು.ಜಿ. ರಾಘವ್, ಎ.ಯು. ಕ್ರಿಯೇಶನ್ಸ್ ಮತ್ತು ದ.ಕ.ಜಿಲ್ಲಾ ಪೊಲೀಸ್ ಘಟಕದ ಸಹಯೋಗದಲ್ಲಿ ಚಿತ್ರ ನಿರ್ಮಾಣಗೊಂಡಿದೆ ಎಂದು ಅವರು ತಿಳಿಸಿದರು
ಎ.ಯು. ಕ್ರಿಯೇಶನ್ಸ್ ಮುಖ್ಯಸ್ಥ ಅಚಲ್ ಉಬರಡ್ಕ ಅವರು ಕಿರುಚಿತ್ರದ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು ಎಡಿಟಿಂಗ್ ಮಾಡಿದ್ದು ಗುರುಮೂರ್ತಿ ಅಮ್ಮಣ್ಣಾಯ ಮತ್ತು ರತ್ನ ಸಿಂಚನ ಅವರು ಸಹನಿರ್ದೇಶಕರಾಗಿದ್ದಾರೆ. ಉಪ್ಪಿನಂಗಡಿಯ ಸರ್ಗಂ ಸ್ಟುಡಿಯೋಸ್ ನ ಸಾತ್ವಿಕ್ ಪಡಿಯಾರ್ ಸಂಗೀತ ನೀಡಿದ್ದು. ಪ್ರಸಾದ್ ಕೊಯಿಲ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಅನೀಶ್ ಗಾಣಿಗ, ಅನುಷಾ ಜೋಗಿ ಪುರುಷರಕಟ್ಟೆ, ಅಚಲ್ ಉಬರಡ್ಕ, ಗುರುಮೂರ್ತಿ ಅಮ್ಮಣ್ಣಾಯ, ಕಿಶೋರ್ ಜೋಗಿ, ಲ್ಮಾ ಸಿಸ್ಮರ್, ದಿವಾಕರ ಸುರ್ಯ, ರಾಜೇಶ್ ಶಾಂತಿನಗರ, ಲಲಿತಾ ಸಿಸ್ಟರ್, ರಾಜಶೇಖರ ಶಾಂತಿನಗರ, ಸಂದೀಪ್ ಆಚಾರ್ಯ, ಪ್ರಕಾಶ್ ಆಚಾರ್ಯ, ಜಯರಾಮ ಆಚಾರ್ಯ, ನವೀನ್ ಕುಲಾಲ್, ಕಿಶೋರ್ ನೀರಕಟ್ಟೆ, ಚಂದ್ರಶೇಖರ ಶೆಟ್ಟಿ ಮತ್ತಿತರರು ಕಿರುಚಿತ್ರದದಲ್ಲಿ ನಟಿಸಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಅಚಲ್, ಅನಿಶ್ ಗಾಣಿಗ, ಗುರುಮೂರ್ತಿ ಅಮ್ಮಣ್ಣಾಯ ಉಪಸ್ಥಿತರಿದ್ದರು.