ಉಡುಪಿ, ಅ.19 : ಪೆಟ್ರೋಲ್ ಸೋರಿಕೆಯಾಗಿ ಸ್ಕೂಟರ್ಗೆ ಬೆಂಕಿ ಹೊತ್ತಿಕೊಂಡು ಸ್ಕೂಟರ್ ಸುಟ್ಟು ಭಸ್ಮವಾಗಿರುವ ಘಟನೆ ಉಡುಪಿಯ ಚಿಟ್ಪಾಡಿಯ ಪೆಟ್ರೋಲ್ ಪಂಪ್ ಬಳಿ ಶುಕ್ರವಾರ ಸಂಭವಿಸಿದೆ.
ಸ್ಕೂಟರ್ ಸವಾರ ಪೆಟ್ರೋಲನ್ನು ಸ್ಕೂಟರಿನ ಸೀಟಿನ ಕೆಳಗೆ ಸಂಗ್ರಹಿಸಿದ್ದರು. ಅವರು ಸ್ಕೂಟರ್ ಅನ್ನು ಕಿಕ್-ಸ್ಟಾರ್ಟ್ ಮಾಡಲು ಪ್ರಯತ್ನಿಸಿದ್ದು, ಇಂಜಿನ್ನಿಂದ ಸೋರಿಕೆಯಾದ ಕಿಡಿಯು ಸೀಟ್ ಕೆಳಗೆ ಸೋರಿಕೆಯಾಗಿದ್ದ ಪೆಟ್ರೋಲ್ಗೆ ತಾಗಿ ದ್ವಿಚಕ್ರ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ಸ್ಕೂಟರ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಪೆಟ್ರೋಲ್ ಪಂಪ್ ಸಿಬ್ಬಂದಿ ಮತ್ತು ಸ್ಥಳೀಯರು ತಕ್ಷಣ ಬೆಂಕಿ ನಂದಿಸಿದ ಪರಿಣಾಮ ಭಾರೀ ಅನಾಹುತ ತಪ್ಪಿದೆ .