ಬೆಂಗಳೂರು,ಸೆ.16 : ಟಿವಿ9 ಕನ್ನಡ ಮತ್ತು ಸ್ವೀಟ್ ಹೋಂ ಜಂಟಿಯಾಗಿ ಆಯೋಜಿಸಿರುವ ರಿಯಲ್ ಎಸ್ಟೇಟ್ ಎಕ್ಸ್ಪೋ 2024 ಚಾಲನೆಗೊಂಡಿದೆ. ಈ ಪ್ರಾಪರ್ಟಿ ಎಕ್ಸ್ಪೋವನ್ನು ಸಚಿವ ಭೈರತಿ ಸುರೇಶ್ ಅವರು ಶುಕ್ರವಾರ ಉದ್ಘಾಟಿ ಸಿದ್ದಾರೆ.
ಮನೆ ಅಥವಾ ಸೈಟ್ ಖರೀದಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ರಾಕೆಟ್ನಂತೆ ಮೇಲೇರುತ್ತಲೇ ಇದೆ. ಎಲ್ಲಾ ವರ್ಗದ ಜನರ ಆಸೆ, ಅಗತ್ಯಗಳಿಗೆ ತಕ್ಕಂತೆ ಮನೆ, ನಿವೇಶನಗಳು ಲಭ್ಯ ಇವೆ. ಆದರೆ, ಅವುಗಳನ್ನು ಹುಡುಕಲು ಸಂಯಮ ಬೇಕು. ಅಷ್ಟು ವ್ಯವಧಾನ, ಸಮಯ ಇರುವವರ ಸಂಖ್ಯೆ ಕಡಿಮೆ. ಹೀಗಾಗಿ, ದುರಾಸೆಯ ಬ್ರೋಕರ್ಗಳ ಜಾಲಕ್ಕೆ ಬೀಳುವುವರೇ ಹೆಚ್ಚು. ಇಂಥವರಿಗೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ ಉತ್ತಮ ಮಾರ್ಗೋಪಾಯ ನೀಡಿದೆ. ನಗರದ ಪ್ರಮುಖ ಲ್ಯಾಂಡ್ ಡೆವಲಪರ್ಗಳು ಈ ಎಕ್ಸ್ಪೋದಲ್ಲಿ ಒಂದೆಡೆ ಲಭ್ಯ ಇರುತ್ತಾರೆ. ಇವರ ವಿವಿಧ ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಪರ್ಟಿಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಮಾಹಿತಿ ಪಡೆಯಬಹುದು.
ಲಕ್ಷುರಿ ವಿಲ್ಲಾ, ಪ್ಲಾಟ್, ಅಪಾರ್ಟ್ಮೆಂಟ್, ಫಾರ್ಮ್ ಲ್ಯಾಂಡ್ಗಳನ್ನು ಒಂದೇ ಸ್ಥಳದಲ್ಲಿ ಮಾಹಿತಿ ಪಡೆದು ಅವಲೋಕಿಸಬಹುದು.ಉದ್ಯಮದ ತಜ್ಞರು, ಪ್ರಾಪರ್ಟಿ ಕನ್ಸಲ್ಟೆಂಟ್, ಲೀಗಲ್ ಅಡ್ವೈಸರ್ಗಳೆಲ್ಲರೂ ಸ್ಥಳದಲ್ಲಿ ನೆರವಿಗೆ ಲಭ್ಯವಿರುತ್ತಾರೆ.ಎಕ್ಸ್ಪೋದಲ್ಲಿ ನೀವು ಪ್ರಾಪರ್ಟಿ ಖರೀದಿಗೆ ನೊಂದಾಯಿಸಿದರೆ ವಿಶೇಷ ರಿಯಾಯಿತಿ, ಆಕರ್ಷಕ ಪಾವತಿ ಅವಕಾಶ ಮತ್ತಿತರ ಎಕ್ಸ್ಕ್ಲೂಸಿವ್ ಆಫರ್ಗಳನ್ನು ಪಡೆಯಬಹುದು.ಇತರ ಹೂಡಿಕೆದಾರರೊಂದಿಗೆ ಮಾತನಾಡಬಹುದು, ನಿಮಗೆ ಪ್ರಾಪರ್ಟಿ ಖರೀದಿಸುವ ಇರಾದೆ ಇದ್ದಲ್ಲಿ ಈ ವರ್ಷದ ಎಕ್ಸ್ಪೋಗೆ ಭೇಟಿನೀಡಬಹುದು.