ಮಂಗಳೂರು, ಡಿ. 10 : ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಡೆಸುತ್ತಿರುವ ಚಳವಳಿಯ ಭಾಗವಾಗಿ ಹಾಗೂ ಈ ಕುರಿತು ಎಲ್ಲ ಜಿಲ್ಲೆಗಳ ವಕೀಲರಿಗೆ ಅರಿವು ಮೂಡಿಸಲು ಡಿಸೆಂಬರ್ 13ರಿಂದ 15ರವರೆಗೆ ನಗರದಲ್ಲಿ ರಾಜ್ಯ ಮಟ್ಟದ ವಕೀಲರ ಕ್ರಿಕೆಟ್ ಹಾಗೂ ಥ್ರೋ ಬಾಲ್ ಟೂರ್ನಿ ಹಮ್ಮಿಕೊಳ್ಳಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿಗೆ ಹೈಕೋರ್ಟ್ ಪೀಠ ಬಂದಲ್ಲಿ ಇಲ್ಲಿನ ಜನರಿಗೆ ಅನುಕೂಲವಾಗಲಿದೆ. ಕ್ರಿಕೆಟ್ ಮತ್ತು ಥೋ ಬಾಲ್ ಟೂರ್ನಿ ಆಯೋಜಿಸಿ, ರಾಜ್ಯದ ಎಲ್ಲ ಜಿಲ್ಲೆಗಳ ವಕೀಲರನ್ನು ನಗರಕ್ಕೆ ಆಹ್ವಾನಿಸಿ ಮತ್ತೊಮ್ಮೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದರು.
ಕ್ರಿಕೆಟ್ನಲ್ಲಿ 36 ತಂಡಗಳು, ಥೋ ಬಾಲ್ನಲ್ಲಿ 10 ತಂಡಗಳು ಭಾಗವಹಿಸಲಿವೆ. ನೆಹರೂ ಮೈದಾನ ಮತ್ತು ಪಣಂಬೂರು ಎನ್ಎಂಪಿಎ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ಡಿಸೆಂಬರ್ 13ರಂದು ಬೆಳಿಗ್ಗೆ 8 ಗಂಟೆಗೆ ವಕೀಲ ಟಿ.ಎನ್. ಪೂಜಾರಿ ಟೂರ್ನಿಗೆ ಚಾಲನೆ ನೀಡುವರು. ಡಿ.14ರಂದು ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಸ್ಪೀಕರ್ ಯು.ಟಿ.ಖಾದರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲೆಯ ಎಲ್ಲ ಶಾಸಕನ್ನು ಆಹ್ವಾನಿಸಲಾಗಿದೆ. ಈ ವೇಳೆ ಬೇಡಿಕೆಯನ್ನು ಮಂಡಿಸಲಾಗುವುದು. 15ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಘದ ಸುಜಿತ್ ಕುಮಾರ್, ಶ್ರೀಧರ್ ಎಚ್ಅಶೋಕ್ ಅರಿಗ, ಗಿರೀಶ್ ಶೆಟ್ಟಿ, ಜಗದೀಶ್ ಶೇಣವ,, ಜ್ಯೋತಿ ಸುವರ್ಣ ಉಪಸ್ಥಿತರಿದ್ದರು.