ವಿಟ್ಲ ,ಡಿ. 14: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿ.8 ರಿಂದ 14ರ ವರೆಗೆ ನಡೆಯಲಿರುವ ದತ್ತಜಯಂತಿ ಮಹೋತ್ಸವ, ಶ್ರೀ ದತ್ತಮಹಾಯಾಗ, ಹರಿಕಥಾ ಸತ್ಸಂಗ ಮತ್ತು ಯಕ್ಷಗಾನ ಸಪ್ತಾಹ ಸಮಾರೋಪ ಸಮಾರಂಭ ಶನಿವಾರ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಆತ್ಮಾರ್ಥವಾಗಿ ಗುರುಸೇವೆ ಮಾಡುವವನೇ ನೈಜ ಗುರುಸೇವಕ. ನಾನು ಎಂಬ ಅಹಂಕಾರ ಇರುವಲ್ಲಿ ಭಗವಂತನಿರುವುದಿಲ್ಲ. ನಮ್ಮ ಸತ್ಕರ್ಮಗಳು ನಮ್ಮನ್ನು ಕಾಪಾಡು ತ್ತವೆ. ಅಹಂಕಾರ, ಮಮಕಾರವಿದ್ದಾಗ ಭಗವಂತನ ಅನುಗ್ರಹ ಸಿಗದು. ಆತ್ಮಾರ್ಥದ ಅರ್ಪಣಾ ಭಾವದ ಸೇವೆಗೆ ಮಹತ್ವವಿದೆ. ಸುಖ -ದುಃಖವನ್ನು ಸಮಾನ ವಾಗಿ ಸ್ವೀಕರಿಸಿ, ಶ್ರೇಷ್ಠವಾದ ಆಧ್ಯಾತ್ಮ ವಿದ್ಯೆಯನ್ನು ಪಡೆದು ಸುಸಂಸ್ಕೃತರಾಗಬೇಕು ಮೊಬೈಲ್ ಕೊಡುವ ಮಕ್ಕಳ ಕೈಗಳಲ್ಲಿ ಭಗವದ್ಗೀತೆಯನ್ನೂ ನೀಡಿ ಎಂದು ಒಡಿಯೂರು ಶ್ರೀ ಸಂದೇಶ ನೀಡಿದರು.
ಸಾಫ್ಟ್ ಶ್ರೀ ಮಾತಾನಂದಮಯಿ ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಹರಿದಾಸಚಂದ್ರ ಕಾಂತ ಭಟ್ ಅಶ್ವತ್ಥಪುರ, ಮುಂಬಯಿ ಶ್ರೀ ಗುರುದೇವ ಸೇವಾ ಬಳಗದ ದಾಮೋದರ ಶೆಟ್ಟಿ, ಡಾ| ಅದೀಪ್ ಶೆಟ್ಟಿ, ಸುರೇಶ್ ರೈ, ದಾವಣಗೆರೆಯ ವಕೀಲ ಹನುಮಂತಪ್ಪ ಉದ್ಯಮಿ ಮೋಹನ ಹೆಗ್ಡೆ ಮುಂಬಯಿ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ ಕಲ್ಪನಾ ಕೆ. ಶೆಟ್ಟಿ, ಸರ್ವಾಣಿ ಪಿ.ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು.. ಯಶ ವಂತ ವಿಟ್ಲ ನಿರೂಪಿಸಿದರು. ಶ್ರೀ ಗ್ರಾಮವಿಕಾಸ ಕೇಂದ್ರದ ಪಿಆರ್ಒ ಮಾತೇಶ್ ಭಂಡಾರಿ ವಂದಿಸಿದರು.